ವಿಜಯಸಾಕ್ಷಿ ಸುದ್ದಿ, ಗದಗ: ಕಲಾ ವಿಕಾಸ ಪರಿಷತ್ ಮತ್ತು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ `ನಾಡದೇವಿಗೆ ನಮನ’ ಸಮಾರಂಭವು ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಅದ್ದೂರಿಯಾಗಿ ಜರುಗಿತು.
ಖ್ಯಾತ ಉದ್ದಿಮೆದಾರ, ಕಲಾ ಪೋಷಕ ಸದಾಶಿವಯ್ಯ ಎಸ್.ಮದರಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ರಜತ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಕೆ. ಗುರುಮಠ ವಹಿಸಿಕೊಂಡಿದ್ದರು. ಪರಿಷತ್ ಸಂಸ್ಥಾಪಕ ವೇ. ಸಿ.ಕೆ.ಹೆಚ್. ಶಾಸ್ತ್ರಿ (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ವಿಕಾಸ ಪರಿಷತ್ ನಡೆದು ಬಂದದಾರಿಯನ್ನು ವಿವರಿಸಿದರು. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ದತ್ತಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಿರಣ ಪ್ರಕಾಶ ಭೂಮಾ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎ.ಟಿ. ನರೇಗಲ್, ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ, ಕಲಾವಿಕಾಸ ಪರಿಷತ್ ಪೋಷಕ ರವಿ ಎಲ್.ಗುಂಜೀಕರ್ ವೇದಿಕೆಯಲ್ಲಿದ್ದರು.
ಮಿಸ್ಸಿಂಗ್ ವುಮೆನ್, ಪರಸ್ಪರ ಮತ್ತಿತರ ಕಥೆಗಳು, ಮತ್ತೆ ಅರಳಲಿ, ಮಾಯಾ ಗುಹೆ ಮತ್ತು ಇತರ ಮಕ್ಕಳ ಕಥೆಗಳು, ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಪುಸ್ತಕಗಳ ಲೇಖಕರಿಗೆ ಪಂ. ಪುಟ್ಟರಾಜ ಕೃಪಾಪೋಷಿತ ವರ್ಷದ ಶ್ರೇಷ್ಠ ಕೃತಿರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಮಾರು 8 ಜನರಿಗೆ ಕಲಾ ವಿಕಾಸ ಕನ್ನಡ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನಿಸಿ ಸಾಧಕರ ಸಾಧನೆಯನ್ನು ಗೌರವಿಸಲಾಯಿತು.
ಸಂಗೀತ ಕಾರ್ಯಕ್ರಮದಲ್ಲಿ ಪಂ. ವೆಂಕಟೇಶ ಆಲ್ಕೋಡ್ ಗಾಯನ, ರಾಘವೇಂದ್ರ ಕೃಷ್ಣಾಜಿ ಕ್ಷತ್ರಿಯ ಭಾನ್ಸುರಿ ವಾದನ, ಸವಿತಾ ಗುಡ್ಡದ ಸುಗಮ ಸಂಗೀತವು ಸಭಾಂಗಣದಲ್ಲಿ ಸೇರಿದ್ದ ಸಭಿಕರಲ್ಲಿ ಸಂಜೆಯ ಚುಮು ಚುಮು ಚಳಿಯಲ್ಲಿಯೂ ಬೆಚ್ಚಗಿನ ಅನುಭವ ನೀಡಿತು. ಪ್ರೊ. ಕೆ.ಹೆಚ್. ಬೇಲೂರು, ಚಂದ್ರು ಬಾಳಿಹಳ್ಳಿ ಮಠ, ರಾಜು ಕುರುಡಗಿ, ಜಾಹೀರ ತಾಡಪತ್ರಿ, ಸಂತೋಷ ಚೆನ್ನಪ್ಪನವರ, ಎಸ್.ಎಸ್. ಪಾಳೇಗಾರ, ಜಿ.ಎ. ಪಾಟೀಲ್, ಎಂ.ಎನ್. ಕಾಮನಳ್ಳಿ, ಕೆ.ಪಿ. ಗುಳಗೌಡ್ರ, ಜಿ.ಜಿ. ಕುಲಕರ್ಣಿ, ಎಸ್.ಎಸ್. ಪಾಟೀಲ್, ಎಸ್.ಆಯ್. ಯಾಳಗಿ, ಎಂ.ಬಿ. ಚನ್ನಪ್ಪಗೌಡರ, ಎಸ್.ಎಸ್. ಉಣ್ಣಿಮಠ, ಬಿ.ಎಂ. ಬಿಳೇಯಲಿ, ರಾಜು ಕಂಟಿಗೊಣ್ಣವರ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.
ಶ್ರೋತೃಗಳಿಗೆ ಮಧ್ಯಾಹ್ನದ ಭೋಜನಸೇವೆಯನ್ನು ವೀರನಗೌಡ ರಾಜಶೇಖರಗೌಡ ಕುಲಕರ್ಣಿ, ರಾತ್ರಿಯ ಭೋಜನ ಸೇವೆಯನ್ನು ಸುದರ್ಶನ ಹಾನಗಲ್, ರಾಜು ಸುಂಕದ, ಎಂ.ಕೆ ತುಪ್ಪದ ವಹಿಸಿಕೊಂಡಿದ್ದರು. ಡಾ. ಸುಮಾ ಬಸವರಾಜ ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು, ಸಂಕೇತಾ ಸಿದ್ಲಿಂಗ ಸ್ವಾಗತಿಸಿದರೆ, ಫಕೀರಮ್ಮ ಚಿಗಟೇರಿ ವಂದಿಸಿದರು. ಶ್ರೀಶೈಲ ಬಡಿಗೇರ ನಿರೂಪಿಸಿದರು. ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಎರಡು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ರಾಜು ಹೆಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಅನ್ನದಾನಿ ಹಿರೇಮಠ, ಅಂದಾನೆಪ್ಪ ವಿಭೂತಿ ಮತ್ತು ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಇವರುಗಳಿಗೆ ಜೀವಮಾನದ ಶ್ರೇಷ್ಠ ಸಾಧನೆಗೆ ನೀಡಲಾಗುವ `ಕಲಾ ವಿಕಾಸ ಕನ್ನಡ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.



