ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜೆಯು ಮತ್ತು ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ.
ಕನ್ನಡ ಕಂಠಪಾಠದಲ್ಲಿ ಓವೈಸ್ ಪಾಪಣ್ಣವರ ಪ್ರಥಮ, ದೇಶ ಭಕ್ತಿ ಗೀತೆಯಲ್ಲಿ ಮೊಹಮ್ಮದ್ ಅರ್ಮಾನ್ ಕಿತ್ತೂರ ಪ್ರಥಮ, ಕ್ಲೇ ಮಾಡೆಲಿಂಗ್ ಇಕ್ರಾ ಬಬರ್ಚಿ ಪ್ರಥಮ, ಕವಾಲಿಯಲ್ಲಿ ಅರ್ಶಿಯಾ ಗ್ರೂಪ್ ಪ್ರಥಮ, ಧಾರ್ಮಿಕ ಪಠಣ ಸೂಫಿಯಾನ್ ವೇಲುರ್ ಪ್ರಥಮ, ಚಿತ್ರಕಲೆಯಲ್ಲಿ ಶಿಜಾ ನಮಾ ಪ್ರಥಮ, ಧಾರ್ಮಿಕ ಪಠಣದಲ್ಲಿ ಸಿಯಾನಾ ರಾಣೆಬೆನ್ನೂರು ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಉಮ್ಮೆ ಐಮನ್ ಹುಬ್ಬಳ್ಳಿ ಪ್ರಥಮ, ಮಿಮಿಕ್ರಿಯಲ್ಲಿ ಬೀಬಿ ಹಾಜರಾ ಕಲ್ಯಾಣಿ ದ್ವಿತೀಯ ಸ್ಥಾನ, ಛದ್ಮವೇಷದಲ್ಲಿ ಇಕ್ರಾ ಬೆಳಗಾವಿ ದ್ವಿತೀಯ ಸ್ಥಾನ, ಕಥೆ ಹೇಳುವ ಸ್ಪರ್ಧೆಯಲ್ಲಿ ಅಲೀನಾ ಬೆಳಗಾವಿ ದ್ವಿತೀಯ ಸ್ಥಾನ, ಚಿತ್ರಕಲೆಯಲ್ಲಿ ಫಾಯಿಝ ನರಗುಂದ ದ್ವಿತೀಯ ಸ್ಥಾನ, ಅಭಿನಯ ಗೀತೆಯಲ್ಲಿ ಅಫ್ರಾಹ್ ಇರಕಲ್ ದ್ವಿತೀಯ ಸ್ಥಾನ, ಹಿಂದಿ ಹಾಗೂ ಕನ್ನಡ ಕಂಠಪಾಠದಲ್ಲಿ ಮಹರಿನ ಕಾತರಕಿ ದ್ವಿತೀಯ ಸ್ಥಾನ, ಅಭಿನಯ ಗೀತೆಯಲ್ಲಿ ಜೋಯಾ ಹುಬ್ಬಳ್ಳಿ ದ್ವಿತೀಯ ಸ್ಥಾನ, ಹಿಂದಿ ಭಾಷಣದಲ್ಲಿ ಸಾದಿಯಾ ಬಬರ್ಚಿ ದ್ವಿತೀಯ ಸ್ಥಾನ, ಗಝಲ್ ಸ್ಪರ್ಧೆಯಲ್ಲಿ ಶಾಫಿನ್ ಕಿತ್ತೂರ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ ಅರ್ಶಿಯಾ ನೂರಿ ಕಲ್ಯಾಣಿ ತೃತೀಯ, ಇಂಗ್ಲಿಷ್ ಭಾಷಣದಲ್ಲಿ ಅರ್ಶಿಯಾ ಕಲ್ಯಾಣಿ ತೃತೀಯ, ಕವನ ವಾಚನದಲ್ಲಿ ಶೈಲಾ ರಾಮೇನಹಳ್ಳಿ ತೃತೀಯ, ಸಂಸ್ಕೃತಿ ಧಾರ್ಮಿಕ ಪಠಣದಲ್ಲಿ ಶೈಲಾ ರಾಮೇನಹಳ್ಳಿ ತೃತೀಯ, ರಂಗೋಲಿ ಸ್ಪರ್ಧೆಯಲ್ಲಿ ಸಾದಿಯ ಬಬರ್ಚಿ ತೃತೀಯ, ಆಂಗ್ಲ ಭಾಷೆಯಲ್ಲಿ ಕಥೆ ಹೇಳುವುದರಲ್ಲಿ ರಶೀದಾ ಕಾಗದಗಾರ ತೃತೀಯ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಶಾಫೀನ್ ಮತ್ತು ಸಂಗಡಿಗರು ತೃತೀಯ ಸ್ಥಾನ ಪಡೆದು ಶಾಲೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ಪ್ರತಿಭೆಗಳಿಗೆ ಹಾಗೂ ತರಬೇತಿ ನೀಡಿದ ಎಲ್ಲ ಗುರುಮಾತೆಯರಿಗೆ ಸಂಸ್ಥೆಯ ಅಧ್ಯಕ್ಷರಾದ ಜುನೇದ ಉಮಚಗಿಯವರು ಅಭಿನಂದನೆ ಸಲ್ಲಿಸಿದ್ದಾರೆ.



