ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್ ಡಾಲಾಯತ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಆಗಮಿಸಿದ್ದರು.
ಸಭೆಯಲ್ಲಿ ಗದಗ ಶಹರ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚಿಸಲಾಯಿತು. ಗದಗ ಶಹರ ಘಟಕದ ಅಧ್ಯಕ್ಷರನ್ನಾಗಿ ಹಾಜಿ ತಾಜುದ್ದೀನ್ ಪಾಪಣ್ಣವರ, ಉಪಾಧ್ಯಕ್ಷರನ್ನಾಗಿ ಖುತ್ಬುದ್ದೀನ್ ಶೇಖ್, ಗದಗ ಶಹರ ಪ್ರಧಾನ ಕಾರ್ಯದರ್ಶಿಗಳನ್ನಾಗಿ ರಿಯಾಜ್ ಅಹ್ಮದ ದೊಡ್ಮಮಣಿ, ಸಹ ಕಾರ್ಯದರ್ಶಿಗಳನ್ನಾಗಿ ಮೀರಾಸಾಬ ಇರಕಲ್ ಮತ್ತು ಶಹರ ಸಂಘಟನಾ ಕಾರ್ಯದರ್ಶಿಗಳನ್ನಾಗಿ ನಾಸೀರ ನರೇಗಲ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯಾಧ್ಯಕ್ಷರಾದ ಮಹ್ಮದಶಫಿ ನಾಗರಕಟ್ಟಿಯವರ ಆದೇಶದ ಮೇರೆಗೆ ಗದಗ ಜಿಲ್ಲಾ ಅಧ್ಯಕ್ಷರಾದ ಎಂ.ಡಿ. ಜಾಫರ್ ಡಾಲಾಯತ್ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ನೇಮಕವಾದ ಎಲ್ಲರೂ ಆದೇಶ ಪಡೆದ ದಿನದಿಂದ ಕಾರ್ಯ ಪ್ರವೃತ್ತರಾಗಬೇಕು, ಗದಗ ಶಹರದಲ್ಲಿರುವ ಮುಸ್ಲಿಂ ಸಮುದಾಯವನ್ನು ಸಂಘಟಿಸಿ, ಅವರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮ ವಹಿಸಬೇಕೆಂದು ವಿನಂತಿ ಮಾಡಲಾಗಿದೆ.



