ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ಉತ್ತರ ಕನ್ನಡದ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ವಾಗ್ಶೀರ್ ಸಬ್‌ಮೆರಿನ್‌ನಲ್ಲಿ ಪ್ರಯಾಣ ನಡೆಸಿದರು.
ಈ ಮೂಲಕ ಸಬ್‌ಮೆರಿನ್‌ನಲ್ಲಿ ಪ್ರಯಾಣಿಸಿದ ಭಾರತದ 2ನೇ ರಾಷ್ಟ್ರಪತಿ ಎಂಬ ದಾಖಲೆಯೂ ದಾಖಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಯನ್ನು ಕದಂಬ ನೌಕಾನೆಲೆಗೆ ಬರಮಾಡಿಕೊಂಡರು. ಕಾರವಾರದ ನೌಕಾನೆಲೆ ಫೇಸ್-2 ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿ ಯುದ್ಧ ಹಡಗುಗಳು ಮತ್ತು ಸಬ್‌ಮೆರಿನ್ ನಿಲ್ದಾಣಗಳೊಂದಿಗೆ ರಿಪೇರಿ ಯಾರ್ಡ್ ಕೂಡ ನಿರ್ಮಾಣವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಸಬ್‌ಮೆರಿನ್‌ನಲ್ಲಿ ಸುಮಾರು ಒಂದು ಗಂಟೆಯ ಐತಿಹಾಸಿಕ ಪ್ರಯಾಣ ನಡೆಸಿದರು. ಈ ಸಂದರ್ಭದಲ್ಲಿ ರಿಯಲ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಚೀಫ್ ಆಫ್ ನೇವಲ್ ಸ್ಟಾಫ್, ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ಇತರ ಹಿರಿಯ ನೌಕಾ ಅಧಿಕಾರಿಗಳು ಉಪಸ್ಥಿತರಿದ್ದರು.



