ವಿಜಯಸಾಕ್ಷಿ ಸುದ್ದಿ, ಗದಗ: ಕಂಜರಭಾಟ ಸಮುದಾಯದ ಸಾಕ್ಷಿ ಮಂಜುನಾಥ್ ಬಾಗಡೆ ಶಾಲಾ ಕ್ರೀಡಾಕೂಟದ ಏರ್ ರೈಫಲ್ ಶೂಟಿಂಗ್‌ನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಸಾಧಕಿ ಸಾಕ್ಷಿ ಮಂಜುನಾಥ ಬಾಗಡೆ ಇವಳಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿನಂದಿಸಿ ರಾಷ್ಟ್ರಮಟ್ಟದಲ್ಲಿ ಜಯಶಾಲಿಯಾಗಿ ಗದಗ ಜಿಲ್ಲೆಗೆ ಕೀರ್ತಿ ತರುವಂತೆ ಶುಭ ಹಾರೈಸಿದರು.
ಸಾಧಕಿ ಸಾಕ್ಷಿ ಮಂಜುನಾಥ್ ಬಾಗಡೆ ಇವಳಿಗೆ ಗದಗ ಜಿಲ್ಲಾ ಯುವ ಕಾಂಗ್ರೆಸ್‌ನ ಕೃಷ್ಣಗೌಡ ಪಾಟೀಲ, ಸುರೇಶ್ ಕಟ್ಟಿಮನಿ, ಮೋಹನ್ ಕಟ್ಟಿಮನಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೆರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವೀಂದ್ರ ಎಸ್ ಹಾಗೂ ಎನ್.ಆರ್. ನಿಡಗುಂದಿ, ಜೆ.ಬಿ. ಅಣ್ಣಿಗೇರಿ ರಾಜಪ್ಪ, ದೈಹಿಕ ಶಿಕ್ಷಕ ಥಾಮಸ್, ಶಾಲಾ ಸಿಬ್ಬಂದಿಗಳು ಹಾಗೂ ತರಬೇತಿದಾರರ ಬಸವರಾಜ ಹೊಂಬಾಳಿ, ಡಾ. ಅನಿಲ ತಮ್ಮನ್ನವರ ಹರಣಶಿಕಾರಿ ಸಮುದಾಯದ ಎಲ್ಲ ಮುಖಂಡರು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ವೀರಾಪುರ್, ವೈ.ಜಿ. ಗಡಾದ, ಅಶೋಕ ಬಾಗಡೆ, ಮನೋಜ್, ದೀಪಕ, ಗಣೇಶ್, ರಮೇಶ್, ಸಂಜೀವ, ವಿನೋದ, ಮಹೇಶ್, ಲಖನ, ಬಾದಲ್, ಕಿರಣ್, ವಿಶ್ವಾಸ, ಮಹೇಶ್ ಪಿ.ಎನ್, ರವಿ ಕಟ್ಟಿಮನಿ, ಸುರೇಶ್ ನವಲೇಕರ್, ರೋಹಿತ್, ಮುಖೇಶ, ರಾಕೇಶ್, ಕುಶಾಲ್, ಸಂತೋಷ್, ಸಚಿನ್, ರಾಹುಲ್, ಕರಣ, ಕಾರ್ತಿಕ್, ರಾಧಾ, ರೋಹಿತ್ ವಿ, ಅರ್ಚನಾ ಬಾಗಡೆ, ತನುಷ, ಅವಿರ, ನಿಹಾಲ್ ಮುಂತಾದವರಿದ್ದರು.



