ಬೆಂಗಳೂರು: ಸಂಬಂಧಿಕರ ಮನೆಗೆ ಸ್ನೇಹಿತರನ್ನು ಕಳುಹಿಸಿ ದರೋಡೆ ಮಾಡಿಸಿದ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಹಮ್ಮದ್ ಶಬಾಜ್ ಖಾನ್ ಹಾಗೂ ಸೂರಜ್ ಬಿ.ಎನ್ ಅಕ್ಬರ್ ಬಂಧಿತರಾಗಿದ್ದು,
ಅಫ್ರೀದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸಮೀರ್ ಎಂಬ ಸಂಬಂಧಿಕನಿಗೆ ಆಸ್ತಿ ಸಂಬಂಧ ಹಣ ಬಂದಿರುವ ಮಾಹಿತಿ ತಿಳಿದಿದ್ದ ಅಫ್ರೀದ್, ತನ್ನ ಸ್ನೇಹಿತರನ್ನು ಕಳುಹಿಸಿ ಮನೆಗೆ ನುಗ್ಗಿಸಿ ರಾಬರಿ ಮಾಡಿಸಿದ್ದಾನೆ.
ಸಮೀರ್ ಪತ್ನಿ ಒಬ್ಬರೇ ಇದ್ದ ವೇಳೆ ಮಚ್ಚು ತೋರಿಸಿ ಬೆದರಿಸಿ ಚಿನ್ನ ಹಾಗೂ 4 ಲಕ್ಷ ನಗದು ಕದ್ದಿದ್ದಾರೆ. ಬಂಧಿತರಿಂದ 2.96 ಲಕ್ಷ ನಗದು ಮತ್ತು ಬಂಗಾರ ಸೇರಿ 7.4 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



