HomeKarnataka Newsತ್ಯಾವರೆಕೊಪ್ಪದಲ್ಲಿ ದುರಂತ; ಜನಿಸಿದ 2 ದಿನದಲ್ಲೇ ನಾಲ್ಕು ಸಿಂಹದ ಮರಿಗಳ ಸಾವು!

ತ್ಯಾವರೆಕೊಪ್ಪದಲ್ಲಿ ದುರಂತ; ಜನಿಸಿದ 2 ದಿನದಲ್ಲೇ ನಾಲ್ಕು ಸಿಂಹದ ಮರಿಗಳ ಸಾವು!

For Dai;y Updates Join Our whatsapp Group

ಶಿವಮೊಗ್ಗ: ಜನಿಸಿದ ಎರಡೇ ದಿನಗಳಲ್ಲಿ ನಾಲ್ಕು ಸಿಂಹದ ಮರಿಗಳು ಮೃತಪಟ್ಟಿರುವ ಘಟನೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ತ್ಯಾವರೆಕೊಪ್ಪ ಮೃಗಾಲಯದಲ್ಲಿರುವ ಐದು ವರ್ಷದ ಏಷ್ಯಾಟಿಕ್ ಸಿಂಹಿಣಿ ‘ಸಾರಾ’ ಸೆಪ್ಟೆಂಬರ್ 16ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಜನಿಸಿದ ಕೇವಲ ಎರಡು ದಿನಗಳಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿವೆ.

ಸಿಂಹಿಣಿ ಸಾರಾ ಮೊದಲ ಬಾರಿಗೆ ತಾಯಿಯಾಗಿದ್ದು, ಮರಿಗಳನ್ನು ನೋಡಿಕೊಳ್ಳುವಲ್ಲಿ ಸೂಕ್ತ ರೀತಿಯಲ್ಲಿ ತಾಯ್ತನ ನಿರ್ವಹಿಸಲು ಸಾಧ್ಯವಾಗದಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ.

ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹಗಳ ಸಂತಾನೋತ್ಪತ್ತಿ ಉದ್ದೇಶದಿಂದ 2025ರಲ್ಲಿ ಪ್ರಾಣಿ ವಿನಿಮಯ ಯೋಜನೆಯಡಿ ಮಧ್ಯಪ್ರದೇಶದ ಇಂದೋರ್‌ನಿಂದ ‘ಶಿವ’ ಹಾಗೂ ‘ಸಾರಾ’ ಹೆಸರಿನ ಸಿಂಹಗಳನ್ನು ತ್ಯಾವರೆಕೊಪ್ಪಕ್ಕೆ ಕರೆತರಲಾಗಿತ್ತು.

ಆದರೆ ಸಾರಾ ಹೆತ್ತ ನಾಲ್ಕೂ ಮರಿಗಳು ಮೃತಪಟ್ಟಿರುವುದು ಸಂತಾನೋತ್ಪತ್ತಿ ಯೋಜನೆಗೆ ಹಿನ್ನಡೆಯಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img