ಚಿತ್ರದುರ್ಗ: ಮೂರನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯಲ್ಲಿ ನಡೆದಿದೆ.
ಡಿವಿಎಸ್ ವಸತಿ ಶಾಲೆಯ SSLC ವಿದ್ಯಾರ್ಥಿ ಕೊಟ್ರೇಶ್(16) ಮೃತ ದುರ್ಧೈವಿಯಾಗಿದ್ದು, ಕೊಟ್ರೇಶ್ ಚಿತ್ರದುರ್ಗದ ಕರಿಯಣ್ಣನಹಳ್ಳಿ ಮೂಲದವನಾಗಿದ್ದು, ಈವರೆಗೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಕೊಟ್ರೇಶ್ 3ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.



