ಬೆಂಗಳೂರು:- ಶಾರ್ಟ್ ಸರ್ಕ್ಯೂಟ್ ನಿಂದ ಒಂಟಿಯಾಗಿ ಮನೆಯಲ್ಲಿದ್ದ ವೃದ್ಧ ಸಾವನ್ನಪ್ಪಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮೈಲಾರಪ್ಪ(80) ಮೃತಪಟ್ಟಿರುವ ವ್ಯಕ್ತಿ. ಮೈಲಾರಪ್ಪ ಅವರು, ಕೆಂಗೇರಿಯಲ್ಲಿ ಮೊಮ್ಮಗನೊಂದಿಗೆ ವಾಸವಿದ್ದರು. ನಿನ್ನೆ ಮೊಮ್ಮಗ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಘಟನೆ ಜರುಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಮೈಲಾರಪ್ಪ ಸಾವಾಗಿರುವ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಕೆಂಗೇರಿ ಪೊಲೀಸರಿಂದ ತನಿಖೆ ಮುಂದುವರೆದಿದೆ.



