Home Bengaluru News ಯುಗಾದಿ ಹಬ್ಬದ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ಹೂ-ಹಣ್ಣು ದರ ಏರಿಕೆ

ಯುಗಾದಿ ಹಬ್ಬದ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ಹೂ-ಹಣ್ಣು ದರ ಏರಿಕೆ

0
ಯುಗಾದಿ ಹಬ್ಬದ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ಹೂ-ಹಣ್ಣು ದರ ಏರಿಕೆ
Spread the love

ಬೆಂಗಳೂರು: ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮೆರೆಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರುಯ ಹೃದಯಭಾಗದ ಕೆಆರ್ ಮಾರುಕಟ್ಟೆನಲ್ಲಿ ಖರೀದಿ ಭರಾಟೆ ಜೋರಾಗಿದೆ. ಬುಧವಾರ ಬೆಳ್ಳಂಬೆಳಿಗ್ಗೆಯಿಂದಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನಸಾಗರ ಹರಿದುಬಂದಿದೆ.

ಹಬ್ಬದ ಹಿನ್ನೆಲೆ ಬೇಡಿಕೆ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ದರದಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಮಲ್ಲಿಗೆ ಹೂವು ಕೆಜಿಗೆ ₹1,000ರವರೆಗೆ ಏರಿಕೆಯಾಗಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.

ಹೂವುಗಳ ದರ (ಕೆಜಿಗೆ ರೂ.):

  • ಮಲ್ಲಿಗೆ – ₹1,000

  • ಮಲ್ಲಿಗೆ ಹಾರ – ₹100

  • ಸೇವಂತಿಗೆ – ₹200–250

  • ಗುಲಾಬಿ – ₹250

  • ಚೆಂಡು ಹೂ – ₹40–50

  • ಬೇವಿನ ಸೊಪ್ಪು (ಕಟ್ಟು) – ₹20

  • ಮಾವಿನ ಸೊಪ್ಪು (ಕಟ್ಟು) – ₹25

ಹಣ್ಣುಗಳ ದರ (ಕೆಜಿಗೆ ರೂ.):

  • ಖರಬೂಜ – ₹100

  • ಬೇಲದ ಹಣ್ಣು – ₹50

  • ದ್ರಾಕ್ಷಿ – ₹120

  • ದಾಳಿಂಬೆ – ₹220

ದರ ಏರಿಕೆಯ ನಡುವೆಯೂ ಜನರು ಹಬ್ಬದ ಸಿದ್ಧತೆಯಲ್ಲಿ ಯಾವುದೇ ಹಿಂಜರಿಕೆ ತೋರದೆ ಖರೀದಿ ಮುಂದುವರಿಸಿದ್ದಾರೆ.

ಇದೇ ವೇಳೆ ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿಯೂ ಯುಗಾದಿ ಖರೀದಿ ಸಡಗರ ತಾರಕ್ಕೇರಿದೆ.


Spread the love

LEAVE A REPLY

Please enter your comment!
Please enter your name here