ಬೆಂಗಳೂರು:- ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದೆ. ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಸುದ್ದಿಗೋಷ್ಠಿಯ ಮೂಲಕ ಫಲಿತಾಂಶ ಘೋಷಿಸಿದ್ದಾರೆ.
ಈ ಬಾರಿ ದಾಖಲೆ ಮಟ್ಟದ ಫಲಿತಾಂಶ ಕಂಡುಬಂದಿದ್ದು, 7,10,363 ವಿದ್ಯಾರ್ಥಿಗಳಲ್ಲಿ 6,32,200 ಮಂದಿ ಪರೀಕ್ಷೆಗೆ ಹಾಜರಾಗಿ, 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇಕಡಾ 86.48 ರಷ್ಟು ರಿಸಲ್ಟ್ ಬಂದಿದೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ.
ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇಕಡಾ 88.07 ವಿದ್ಯಾರ್ಥಿನಿಯರು ಪಾಸಾದರೆ, ಶೇಕಡಾ 83.65 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಿಭಾಗಾವಾರು ಫಲಿತಾಂಶ ಹೀಗಿದೆ:
ವಿಜ್ಞಾನ – ಶೇ.91.69,
ವಾಣಿಜ್ಯ – ಶೇ.88.04,
ಕಲಾ – ಶೇ.72.86.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಶೇಕಡಾ 96.39 ಫಲಿತಾಂಶ ಸಾಧಿಸಿದೆ.
ದಕ್ಷಿಣ ಕನ್ನಡ ಶೇಕಡಾ 96.35 ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಯಾದಗಿರಿ ಶೇಕಡಾ 71.21 ಫಲಿತಾಂಶದಿಂದ ರಾಜ್ಯದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ.
ಇತರ ಪ್ರಮುಖ ಜಿಲ್ಲೆಗಳ ಫಲಿತಾಂಶ ಹೀಗಿದೆ:
- ಉಡುಪಿ – 96.39%
- ದಕ್ಷಿಣ ಕನ್ನಡ – 96.35%
- ಕೊಡಗು – 92.34%
- ವಿಜಯಪುರ – 92%
- ಉತ್ತರ ಕನ್ನಡ – 91.78%
- ಬೆಂಗಳೂರು ಗ್ರಾಮಾಂತರ – 91.00%
- ಚಿಕ್ಕಮಗಳೂರು – 90.80%
- ಬೆಂಗಳೂರು ದಕ್ಷಿಣ – 90.55%
- ಚಿಕ್ಕಬಳ್ಳಾಪುರ – 90.24%
- ಬೆಂಗಳೂರು ಉತ್ತರ – 90.05%
- ಹಾಸನ – 89.71%
- ಮಂಡ್ಯ – 88.85%
- ರಾಮನಗರ – 87.90%
- ಕೋಲಾರ – 87.38%
- ಶಿವಮೊಗ್ಗ – 87.62%
- ತುಮಕೂರು – 86.89%
- ಕೊಪ್ಪಳ – 86.80%
- ಚಾಮರಾಜನಗರ – 84.68%
- ಮೈಸೂರು – 84.80%
- ಬೀದರ್ – 84.61%
- ಬಾಗಲಕೋಟೆ – 84.12%
- ಹಾವೇರಿ – 84.11%
- ಧಾರವಾಡ – 83.31%
- ಚಿಕ್ಕೋಡಿ – 83.10%
- ದಾವಣಗೆರೆ – 81.99%
- ಬೆಳಗಾವಿ – 80.32%
- ಚಿತ್ರದುರ್ಗ – 79.12%
- ಬಳ್ಳಾರಿ – 78.69%
- ಕಲಬುರಗಿ – 76.97%
- ಗದಗ – 76.65%
- ರಾಯಚೂರು – 74.09%
- ಯಾದಗಿರಿ – 71.21%.



