HomeSports Newsಅಂಪೈರ್ ಸೂಚನೆ ನಿರ್ಲಕ್ಷ್ಯ: RCB ಆಟಗಾರ ಟಿಮ್ ಡೇವಿಡ್​ಗೆ ಭಾರಿ ದಂಡ!

ಅಂಪೈರ್ ಸೂಚನೆ ನಿರ್ಲಕ್ಷ್ಯ: RCB ಆಟಗಾರ ಟಿಮ್ ಡೇವಿಡ್​ಗೆ ಭಾರಿ ದಂಡ!

For Dai;y Updates Join Our whatsapp Group

Spread the love

ಐಪಿಎಲ್ 2026ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಉಲ್ಲಂಘಿಸಿದ ಕಾರಣ, ಟಿಮ್ ಡೇವಿಡ್‌ಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.

ಘಟನೆಯ ಪ್ರಕಾರ, ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಬೌಲ್ ಮಾಡುತ್ತಿದ್ದ 18ನೇ ಓವರ್ ವೇಳೆ ಟಿಮ್ ಡೇವಿಡ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ನೋ-ಬಾಲ್‌ಗೆ ಸಿಕ್ಸರ್ ಸಿಡಿಸಿದ ಬಳಿಕ, ಚೆಂಡು ಒದ್ದೆಯಾಗಿದ್ದ ಕಾರಣ ಅಂಪೈರ್‌ಗಳು ಅದನ್ನು ಬದಲಾಯಿಸಲು ನಿರ್ಧರಿಸಿದರು.

ಹೊಸ ಚೆಂಡುಗಳನ್ನು ತರಲಾಗುತ್ತಿದ್ದಾಗ ಟಿಮ್ ಡೇವಿಡ್ ಚೆಂಡುಗಳ ಪೆಟ್ಟಿಗೆಯಿಂದ ಒಂದು ಚೆಂಡನ್ನು ತೆಗೆದುಕೊಂಡು ಅದನ್ನು ಪರಿಶೀಲಿಸುತ್ತಿದ್ದರು. ಅಂಪೈರ್ ಪದೇ ಪದೇ ಚೆಂಡನ್ನು ಹಿಂತಿರುಗಿಸಲು ಸೂಚಿಸಿದರೂ, ಡೇವಿಡ್ ಅದನ್ನು ಪಾಲಿಸದಿರುವುದು ವಿವಾದಕ್ಕೆ ಕಾರಣವಾಯಿತು.

ಮತ್ತೊಂದು ಘಟನೆಯಲ್ಲಿ, ಜಿತೇಶ್ ಅವರ ವಿಕೆಟ್ ನಂತರವೂ ಟಿಮ್ ಡೇವಿಡ್ ಚೆಂಡನ್ನು ಹಿಡಿದುಕೊಂಡು ಅಂಪೈರ್ ಸೂಚನೆಗಳನ್ನು ನಿರ್ಲಕ್ಷಿಸಿದರೆಂದು ವರದಿಯಾಗಿದೆ. ಈ ನಡೆ ಅಂಪೈರ್‌ಗಳ ನಿರ್ದೇಶನಕ್ಕೆ ವಿರುದ್ಧವಾಗಿದ್ದು, ನಿಯಮ ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯ ಅಧಿಕಾರಿಗಳು ನೀಡಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!