ಬಾಲಿವುಡ್ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಕುಟುಂಬದಲ್ಲಿ ಮತ್ತೊಂದು ಸದಸ್ಯರ ಆಗಮನದ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಮೂಲಕ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಹಂಚಿಕೊಂಡಿರುವ ಫೋಟೋದಲ್ಲಿ ಮಗಳು ದುವ ಕಾಣಿಸಿಕೊಂಡಿದ್ದು, ಈ ಕ್ರಿಯೇಟಿವ್ ಅನೌನ್ಸ್ಮೆಂಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸುದ್ದಿ ಹೊರಬಂದ ತಕ್ಷಣವೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.
2018ರಲ್ಲಿ ವಿವಾಹವಾದ ಈ ಜೋಡಿ, 2024ರಲ್ಲಿ ಮೊದಲ ಮಗುವಿಗೆ ಸ್ವಾಗತ ಕೋರಿತ್ತು. ಈಗ ಮತ್ತೆ ಪೋಷಕರಾಗುತ್ತಿರುವ ಸಂತೋಷದಲ್ಲಿ ತೇಲುತ್ತಿರುವ ದಂಪತಿ, ತಮ್ಮ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯವನ್ನು ಬಹಿರಂಗಪಡಿಸಿದ್ದಾರೆ.
ಇದಕ್ಕೂ ನಡುವೆ, ರಣವೀರ್ ಸಿಂಗ್ ತಮ್ಮ ಇತ್ತೀಚಿನ ಸಿನಿಮಾದ ಯಶಸ್ಸನ್ನು ಸವಿಯುತ್ತಿದ್ದು, ದೀಪಿಕಾ ಪಡುಕೋಣೆ ಮುಂದಿನ ದೊಡ್ಡ ಪ್ರಾಜೆಕ್ಟ್ಗಳತ್ತ ಗಮನ ಹರಿಸಿದ್ದಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಯ್ದುಕೊಂಡು ಸಾಗುತ್ತಿರುವ ಈ ಜೋಡಿ, ಇದೀಗ ಮತ್ತೊಂದು ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.



