HomeUncategorizedಬಾಲಿವುಡ್‌ನಲ್ಲಿ ಸಂಭ್ರಮದ ಸುದ್ದಿ: ದೀಪಿಕಾ-ರಣವೀರ್ ದಂಪತಿಯಿಂದ ಎರಡನೇ ಮಗುವಿನ ಘೋಷಣೆ

ಬಾಲಿವುಡ್‌ನಲ್ಲಿ ಸಂಭ್ರಮದ ಸುದ್ದಿ: ದೀಪಿಕಾ-ರಣವೀರ್ ದಂಪತಿಯಿಂದ ಎರಡನೇ ಮಗುವಿನ ಘೋಷಣೆ

For Dai;y Updates Join Our whatsapp Group

Spread the love

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಕುಟುಂಬದಲ್ಲಿ ಮತ್ತೊಂದು ಸದಸ್ಯರ ಆಗಮನದ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಮೂಲಕ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಹಂಚಿಕೊಂಡಿರುವ ಫೋಟೋದಲ್ಲಿ ಮಗಳು ದುವ ಕಾಣಿಸಿಕೊಂಡಿದ್ದು, ಈ ಕ್ರಿಯೇಟಿವ್ ಅನೌನ್ಸ್‌ಮೆಂಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸುದ್ದಿ ಹೊರಬಂದ ತಕ್ಷಣವೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

2018ರಲ್ಲಿ ವಿವಾಹವಾದ ಈ ಜೋಡಿ, 2024ರಲ್ಲಿ ಮೊದಲ ಮಗುವಿಗೆ ಸ್ವಾಗತ ಕೋರಿತ್ತು. ಈಗ ಮತ್ತೆ ಪೋಷಕರಾಗುತ್ತಿರುವ ಸಂತೋಷದಲ್ಲಿ ತೇಲುತ್ತಿರುವ ದಂಪತಿ, ತಮ್ಮ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯವನ್ನು ಬಹಿರಂಗಪಡಿಸಿದ್ದಾರೆ.

ಇದಕ್ಕೂ ನಡುವೆ, ರಣವೀರ್ ಸಿಂಗ್ ತಮ್ಮ ಇತ್ತೀಚಿನ ಸಿನಿಮಾದ ಯಶಸ್ಸನ್ನು ಸವಿಯುತ್ತಿದ್ದು, ದೀಪಿಕಾ ಪಡುಕೋಣೆ ಮುಂದಿನ ದೊಡ್ಡ ಪ್ರಾಜೆಕ್ಟ್‌ಗಳತ್ತ ಗಮನ ಹರಿಸಿದ್ದಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಯ್ದುಕೊಂಡು ಸಾಗುತ್ತಿರುವ ಈ ಜೋಡಿ, ಇದೀಗ ಮತ್ತೊಂದು ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!