HomeBengaluru Newsಬೆಂಗಳೂರಿನ ಗಾಳಿ ಸ್ವಲ್ಪ ಸುಧಾರಣೆ: ಇನ್ನೂ ಅಪಾಯದ ಮಟ್ಟದಲ್ಲೇ ಏರ್ ಕ್ವಾಲಿಟಿ!

ಬೆಂಗಳೂರಿನ ಗಾಳಿ ಸ್ವಲ್ಪ ಸುಧಾರಣೆ: ಇನ್ನೂ ಅಪಾಯದ ಮಟ್ಟದಲ್ಲೇ ಏರ್ ಕ್ವಾಲಿಟಿ!

For Dai;y Updates Join Our whatsapp Group

Spread the love

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದು, ಬೆಂಗಳೂರಿನ ಗಾಳಿಯ ಮಟ್ಟವೂ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ.

ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾಗಿದ್ದರೂ, ಇನ್ನೂ ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕಿಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಈಗ 146ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ಮಟ್ಟಗಳಿಗೆ ಹೋಲಿಸಿದರೆ ಸುಧಾರಣೆಯಾಗಿದ್ದರೂ, WHO ಮಾನದಂಡದ ಪ್ರಕಾರ ಇನ್ನೂ ಅಪಾಯದ ಮಟ್ಟದಲ್ಲಿಯೇ ಉಳಿದಿದೆ.

ರಾಜ್ಯದ ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬಂದಿದೆ. ಮಂಗಳೂರು ನಗರದಲ್ಲಿ AQI 115, ಮೈಸೂರಿನಲ್ಲಿ 126, ಬಳ್ಳಾರಿಯಲ್ಲಿ 141 ಮತ್ತು ಶಿವಮೊಗ್ಗದಲ್ಲಿ 125 ದಾಖಲಾಗಿದೆ. ಬೆಳಗಾವಿಯಲ್ಲಿ 53 ಮತ್ತು ಹುಬ್ಬಳ್ಳಿಯಲ್ಲಿ 67 AQI ದಾಖಲಾಗಿದ್ದು, ಈ ನಗರಗಳಲ್ಲಿ ಗಾಳಿ ಗುಣಮಟ್ಟ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಕಲಬುರ್ಗಿ (109), ವಿಜಯಪುರ (109) ಮತ್ತು ಉಡುಪಿ (124) ನಗರಗಳಲ್ಲಿಯೂ ಮಧ್ಯಮದಿಂದ ಕಳಪೆ ಮಟ್ಟದ ಗಾಳಿ ಗುಣಮಟ್ಟ ದಾಖಲಾಗಿದೆ.

ತಜ್ಞರ ಪ್ರಕಾರ, AQI 0ರಿಂದ 50ರವರೆಗೆ ಉತ್ತಮ, 50ರಿಂದ 100 ಮಧ್ಯಮ, 100ರಿಂದ 150 ಕಳಪೆ, 150ರಿಂದ 200 ಅನಾರೋಗ್ಯಕರ, 200ರಿಂದ 300 ಗಂಭೀರ ಮತ್ತು 300ಕ್ಕೂ ಮೇಲ್ಪಟ್ಟರೆ ಅಪಾಯಕಾರಿ ಮಟ್ಟವೆಂದು ಪರಿಗಣಿಸಲಾಗುತ್ತದೆ.

ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸಂವೇದನಾಶೀಲ ವ್ಯಕ್ತಿಗಳು, ವೃದ್ಧರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!