HomeGadag Newsಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ..! ಮಹಿಳಾ ಹೋಂ ಗಾರ್ಡ್ ಬಚಾವ್-ವಿಡಿಯೋ ವೈರಲ್

ಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ..! ಮಹಿಳಾ ಹೋಂ ಗಾರ್ಡ್ ಬಚಾವ್-ವಿಡಿಯೋ ವೈರಲ್

For Dai;y Updates Join Our whatsapp Group

Spread the love

ಗದಗ: ಭಾರಿ ಗಾಳಿ, ಗುಡುಗು ಸಹಿತ ಸುರಿದ ಮಳೆಯ ಆರ್ಭಟಕ್ಕೆ ಗದಗ ಜಿಲ್ಲೆ ಭಾನುವಾರ ಸಂಜೆ ಅಲ್ಲೋಲ-ಕಲ್ಲೋಲಗೊಂಡಿತು.

ನಗರದ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದರೆ, ತಗಡಿನ ಶೀಟ್‌ಗಳು ಗಾಳಿಗೆ ಹಾರಿ ಜನರಲ್ಲಿ ಆತಂಕ ಸೃಷ್ಟಿಸಿವೆ.

ಗದಗ ಸಮೀಪದ ಮಲ್ಲಸಮುದ್ರ ಬಳಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದ ಘಟನೆ ಒಂದು ಕ್ಷಣ ಜನರ ಹೃದಯ ಬಡಿತ ಹೆಚ್ಚಿಸುವಂತಿತ್ತು. ಡ್ಯೂಟಿ ಮುಗಿಸಿಕೊಂಡು ಬಸ್ ಹತ್ತಲು ಮಳೆ-ಗಾಳಿಯ ನಡುವೆ ಓಡೋಡಿ ಬರುತ್ತಿದ್ದ ಮಹಿಳಾ ಹೋಂ ಗಾರ್ಡ್ ಅವರತ್ತ ಏಕಾಏಕಿ ಬಿರುಗಾಳಿಯ ರಭಸಕ್ಕೆ ತಗಡಿನ ಶೀಟ್ ಹಾರಿ ಬಂದಿದೆ.

ಅದೃಷ್ಟವಶಾತ್ ಶೀಟ್ ಮಹಿಳೆಗೆ ತಗುಲದೇ ಜಸ್ಟ್ ಮಿಸ್ ಆಗಿದ್ದು, ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲ ಕ್ಷಣಗಳ ಕಾಲ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದು, ಮಹಿಳಾ ಹೋಂ ಗಾರ್ಡ್ ಕೂಡ ಒಂದು ಕ್ಷಣ ವಿಚಲಿತರಾದರು.

ಈ ಭಯಾನಕ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರಿ ಗಾಳಿ ಮತ್ತು ಮಳೆಯಿಂದ ಗದಗ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ, ಮರಗಳು ಉರುಳುವುದು, ತಗಡುಗಳು ಹಾರುವುದು ಸೇರಿದಂತೆ ಹತ್ತಾರು ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಡರಗಿ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆಯೇ ತಗಡೊಂದು ಹಾರಾಡುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಏನೂ ಎಂಬ ಆತಂಕ ವಾಹನ ಸವಾರರನ್ನು ಕಾಡುತ್ತಿದೆ. ಒಟ್ಟಿನಲ್ಲಿ ಭಾನುವಾರ ಸಂಜೆ ನಡೆದ ಅನಾಹುತ ಹಲವು ಅವಾಂತರ ಸೃಷ್ಟಿ ಮಾಡಿದರೂ ಯಾವುದೇ ಜೀವ ಹಾನಿಯಾಗದೇ ಇರೋದು ಸಮಾಧಾನ ತಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!