ಚಿತ್ರದುರ್ಗ: ಮುಖ್ಯಮಂತ್ರಿ ಪದಗ್ರಹಣದ ಮುನ್ನ ಡಿ.ಕೆ. ಶಿವಕುಮಾರ್ ಅವರಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಶುಭಾಶಯ ಮತ್ತು ಆಶೀರ್ವಾದ ಕೋರಿದ್ದಾರೆ.
ಮಾದನಾಯಕನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಡಿಕೆ ಶಿವಕುಮಾರ್ ಅವರು ಮಠದ ಭಕ್ತರಾಗಿದ್ದು, ಹಲವು ವರ್ಷಗಳಿಂದ ಶ್ರದ್ಧಾ-ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ಗುರುಗಳ ಕೃಪೆ ಮತ್ತು ಭಕ್ತರ ಆಶೀರ್ವಾದದಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ ಎಂದು ಹೇಳಿದರು.
ರೈತರು, ವ್ಯಾಪಾರಿಗಳು, ಮಹಿಳೆಯರು, ಯುವಕರು ಹಾಗೂ ಸಮಾಜದ ಎಲ್ಲ ವರ್ಗಗಳ ಹಿತಕ್ಕಾಗಿ ಕೆಲಸ ಮಾಡುವ ಶಕ್ತಿ ಅವರಿಗೆ ದೊರೆಯಲಿ. ರಾಜ್ಯದ ಅಭಿವೃದ್ಧಿಗೆ ಸಮರ್ಪಿತ ಆಡಳಿತ ನೀಡುವಂತಾಗಲಿ ಎಂದು ಆಶಿಸಿದರು.
ಸಿಎಂ ಪ್ರಮಾಣವಚನದ ಮುಹೂರ್ತವೂ ಅತ್ಯಂತ ಶುಭಕರವಾಗಿದ್ದು, ಅವರ ರಾಜಕೀಯ ಪಯಣ ಮತ್ತಷ್ಟು ಯಶಸ್ಸಿನತ್ತ ಸಾಗಲಿದೆ ಎಂದು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.



