ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮೊಹರಂ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ಅದು ಸತ್ಯ, ನ್ಯಾಯ, ತ್ಯಾಗ ಮತ್ತು ಮಾನವೀಯತೆಯ ಶಾಶ್ವತ ಸಂದೇಶ ಸಾರುವ ಪವಿತ್ರ ದಿನವಾಗಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಾಜುದ್ದೀನ್ ಎಂ. ಕಿಂಡ್ರಿ ಹೇಳಿದರು.
ಮೊಹರಂ ಪ್ರಯುಕ್ತ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಅವರು, ಇಮಾಮ್ ಹುಸೇನ್ (ರ.ಅ) ಅವರ ತ್ಯಾಗ, ಧೈರ್ಯ ಮತ್ತು ನ್ಯಾಯಕ್ಕಾಗಿ ನಡೆಸಿದ ಹೋರಾಟವು ಇಡೀ ಮಾನವಕುಲಕ್ಕೆ ಆದರ್ಶವಾಗಿದೆ. ಅನ್ಯಾಯದ ಮುಂದೆ ತಲೆಬಾಗದೆ, ಸತ್ಯದ ಮಾರ್ಗದಲ್ಲಿ ಕೊನೆಯವರೆಗೂ ಅಚಲವಾಗಿ ನಿಲ್ಲುವ ಸಂದೇಶವನ್ನು ಮೊಹರಂ ಸಾರುತ್ತದೆ ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ಅನ್ಯಾಯ, ಅಸಮಾನತೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೊಹರಂನ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ. ಪ್ರತಿಯೊಬ್ಬರೂ ಸತ್ಯ, ನ್ಯಾಯ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಾಲಶಾಪೀರ್, ಮಕಾಂದರ್, ಜಾಫರ್ ಮೌಲಾನ, ಹಿರಿಯರಾದ ಇಮಾಮಸಾಬ್, ನದ್ದಿಮುಲ್ಲಾ, ಹಮೀದ್ ಮುಜಾವರ್, ಹೈದರಾಲಿ ಖವಾಸ್, ಮುನ್ನಾ ಢಾಲಾಯತ್, ದಾವುದ್ ಜಮಾಲ್, ದಾವಲಸಾಬ್ ಲಕ್ಷ್ಮೇಶ್ವರ, ಇಮ್ಮಣ್ಣ ಕಿಂಡ್ರಿ, ರಾಜೇಸಾಬ್ ಸೈಯದ್‌ಬಡೆ, ಇಮಾಮ್ ಜಾಫರ್, ಲಾಡಸಾಬ್, ಮಾಬೂಸಾಬ್ ಅಬ್ಬುನವರ, ಮಹಬೂಬ್ ಅಲಿ ಶೇಖ್, ಹೈದರ್ ಶೇಖ್, ಮಹಮ್ಮದ್ ರಫಿ ಮುಲ್ಲಾ, ಖ್ವಾಜಾ ಕಿಚಡಿ ಹಾಗೂ ಸಲೀಂ ಫ್ಲೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



