ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗ ನಿಬಂಧ ಹಾಗೂ ಯೋಗಾಸನ ಸಮೂಹ ನೃತ್ಯ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಗಿದೆ.
ಯೋಗ ನಿಬಂಧ ಸ್ಪರ್ಧೆಯಲ್ಲಿ ಸುನಂದಾ ಜ್ಞಾನೋಪಂತರ ಹಾಗೂ ಸುಲೋಚನಾ ಐಹೊಳೆ ಪ್ರಥಮ, ಗೀತಾ ಹೂಗಾರ ದ್ವಿತೀಯ, ಮಲ್ಲಯ್ಯ ಕಲಹಾಳ ತೃತೀಯ ಸ್ಥಾನ ಪಡೆದರೆ, ರೋಜಾ ಮುಗಳಿ ಸಮಾಧಾನಕರ ಬಹುಮಾನ ಪಡೆದರು.
ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ (ಸಿದ್ಧಲಿಂಗನಗರ, ಗದಗ) ಪ್ರಥಮ, ನಿತ್ಯಂ ಯೋಗ ಕೇಂದ್ರ ದ್ವಿತೀಯ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಗಳಿಸಿತು.
ಸ್ಪರ್ಧೆಯಲ್ಲಿ ಯೋಗ ನಿಬಂಧ ವಿಭಾಗದಲ್ಲಿ 24 ಹಾಗೂ ಯೋಗಾಸನ ಸಮೂಹ ನೃತ್ಯ ವಿಭಾಗದಲ್ಲಿ 49 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಎಸ್.ವೈ.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ, ಲಿಂಗಾಯತ ಪ್ರಗತಿಶೀಲ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾಗಿತ್ತು ಎಂದು ಸ್ಪರ್ಧೆಗಳ ಸಂಯೋಜಕ ಕೆ.ಎಸ್. ಪಲ್ಲೇದ ತಿಳಿಸಿದ್ದಾರೆ.



