HomeIndia Newsಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚಿಕೆ ಸಂಚು: ಮುಂಬೈನಲ್ಲಿ ದೊಡ್ಡ ಪ್ರಕರಣ ಭೇದಿಸಿದ ಪೊಲೀಸರು!

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚಿಕೆ ಸಂಚು: ಮುಂಬೈನಲ್ಲಿ ದೊಡ್ಡ ಪ್ರಕರಣ ಭೇದಿಸಿದ ಪೊಲೀಸರು!

For Dai;y Updates Join Our whatsapp Group

ಮುಂಬೈ: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ವಿಷದ ಮಾತ್ರೆಗಳನ್ನು ಹಂಚಿ ಅನಾಹುತ ಸೃಷ್ಟಿಸಲು ಯತ್ನಿಸಿದ ದೊಡ್ಡ ಸಂಚೊಂದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.

ಡೊಂಗ್ರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪುಣೆಯ ನಿವಾಸಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನೋವು ನಿವಾರಕ ಮಾತ್ರೆಗಳು ಎಂದು ಹೇಳಿ, ವಾಸ್ತವದಲ್ಲಿ ಇಲಿ ಪಾಷಾಣ ಮಿಶ್ರಿತ ವಿಷಕಾರಿ ಮಾತ್ರೆಗಳನ್ನು ಜನರಿಗೆ ಹಂಚುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಬಳಿಯಿಂದ ಸುಮಾರು 14,900 ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊಹರಂ ಮೆರವಣಿಗೆ ಸಂದರ್ಭದಲ್ಲಿ ವಿಷದ ಮಾತ್ರೆ ಸೇವಿಸಿದ ವ್ಯಕ್ತಿಯೊಬ್ಬರು ವಾಂತಿ–ಭೇದಿಯಿಂದ ಅಸ್ವಸ್ಥಗೊಂಡ ನಂತರ ಈ ಸಂಚಿನ ಬಗ್ಗೆ ಮಾಹಿತಿ ಪೊಲೀಸರಿಗೆ ದೊರೆತಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಚಟುವಟಿಕೆಗಳು ಬಯಲಾಗಿವೆ.

ಆತನ ಚೀಲದಲ್ಲಿ ಸಂಗ್ರಹಿಸಿದ್ದ ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಕುರಿತು ತೀವ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img