ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ರೋಟರಿ ಕ್ಲಬ್, ಬಸವೇಶ್ವರ ಬ್ಲಡ್ ಸೆಂಟರ್ ಹಾಗೂ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಗರದ ರೋಟರಿ ಐಕೇರ್ ಸೆಂಟರ್‌ನಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ರೋಟರಿ ಕ್ಲಬ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 10ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದರು.
ರೋಟರಿ 3170ರ ಸಹಾಯಕ ಜಿಲ್ಲಾ ಗವರ್ನರ್ ಶ್ರೀಧರಗೌಡ ಎ. ಧರ್ಮಾಯತ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ, ಕಾರ್ಯದರ್ಶಿ ಅಕ್ಷಯ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಡಾ. ಆರ್.ಜಿ. ಗಚ್ಚಿನಮಠ, ನಿಕಟಪೂರ್ವ ಕಾರ್ಯದರ್ಶಿ ಸುರೇಶ ಕುಂಬಾರ, ಶ್ರೀಧರ ಸುಲ್ತಾನಪೂರ, ಡಾ. ಆರ್.ಬಿ. ಉಪ್ಪಿನ, ವಿಶ್ವನಾಥ ಯಳಮಲಿ, ಇನ್ನರ್‌ವ್ಹೀಲ್ ಕ್ಲಬ್‌ನ ಮಂಜುಳಾ ಅಕ್ಕಿ, ಅಶ್ವಿನಿ ಜಗತಾಪ, ಶಿವಲೀಲಾ ಅಕ್ಕಿ, ಸುಶೀಲಾ ಕೋಟಿ, ನೀಲಾಂಭಿಕಾ ಉಗಲಾಟ, ಸವಿತಾ ಧರ್ಮಾಯತ, ಸಂಧ್ಯಾ ಕೋಟಿ, ಶಿಲ್ಪಾ ಅಕ್ಕಿ, ಪುಷ್ಪಾ ಭಂಡಾರಿ, ಮೀನಾಕ್ಷಿ ಕೊರವನವರ, ಸುವರ್ಣಾ ವಸ್ತ್ರದ, ವೀಣಾ ಕಾವೇರಿ ಹಾಗೂ ರೋಟ್ರಾಕ್ಟ್ ಕ್ಲಬ್‌ನ ಸನ್ಮತಿ, ಸುಮಾ, ಭಾನುಪ್ರಕಾಶ, ಶ್ರುಜನ್ ಸೇರಿದಂತೆ ಹಲವರು ಭಾಗವಹಿಸಿದ್ದರು.



