ವಿಜಯಸಾಕ್ಷಿ ಸುದ್ದಿ, ಗದಗ: ಕೆಎಸ್ಆರ್ಟಿಸಿ ಗದಗ ಡಿಪೋದಲ್ಲಿ 25 ವರ್ಷಗಳ ಕಾಲ ಚಾಲಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಬೆಳ್ಳಿ ಪದಕ ಪ್ರಶಸ್ತಿ ಪಡೆದಿರುವ ಪರಶುರಾಮ ಚಂದಪ್ಪ ಲಮಾಣಿ ಅವರು ಜೂನ್ 30ರಂದು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನರಸಾಪೂರ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಳಸಾಪೂರ ಗ್ರಾಮದ ಎಸಿಎಂ ಗಾರ್ಮೆಂಟ್ಸ್ ಮಾಲೀಕರಾದ ಅಶೋಕ ರಾಠೋಡ, ಸಂಗೀತಾ ರಾಠೋಡ ಹಾಗೂ ಶಾಂತಾ ರಾಠೋಡ ಅವರ ನೇತೃತ್ವದಲ್ಲಿ ಪರಶುರಾಮ ಲಮಾಣಿ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಿ, ಅವರ ದೀರ್ಘಕಾಲದ ಸೇವೆ, ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸುರೇಶ ಚಂದಪ್ಪ ಲಮಾಣಿ, ಲಕ್ಷ್ಮಣ ರಾಠೋಡ, ಶಂಕರಪ್ಪ ರಾಠೋಡ, ರಮೇಶ ಚವ್ಹಾಣ ಸೇರಿದಂತೆ ಎಸಿಎಂ ಗಾರ್ಮೆಂಟ್ಸ್ನ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದು, ಸೇವಾ ನಿವೃತ್ತ ಜೀವನ ಸುಖ-ಶಾಂತಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ ಎಂದು ಮಹಾಂತೇಶ ರಾಠೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



