HomeGadag Newsಜು.20ರಿಂದ ಮನೆ-ಮನೆಗೆ ರಾಯರ ಪಾದುಕೆ ಪೂಜೆ

ಜು.20ರಿಂದ ಮನೆ-ಮನೆಗೆ ರಾಯರ ಪಾದುಕೆ ಪೂಜೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ”: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಹಾಗೂ ಅಪಮೃತ್ಯು ಪರಿಹಾರದ ಗುರು ಎಂದೇ ಆರಾಧಿಸಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಗದಗ ನಗರದ ಕಳಸಾಪೂರ ರಸ್ತೆಯಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಿಂದ ಭಕ್ತರ ಮನೆ-ಮನೆಗೆ ರಜತ ಪಾದುಕೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆರಾಧನಾ ಮಹೋತ್ಸವದ ಪ್ರಯುಕ್ತ ರಜತ ಪ್ರಹ್ಲಾದರಾಯರ ಮೂರ್ತಿ, ರಜತ ಬೃಂದಾವನ ಹಾಗೂ ರಜತ ಪಾದುಕೆಗಳನ್ನು ಭಕ್ತರ ಮನೆಗಳಿಗೆ ಕೊಂಡೊಯ್ದು ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಸೇವೆಯಿಂದ ಭಕ್ತರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗುವ ಅಪೂರ್ವ ಅವಕಾಶ ದೊರೆಯಲಿದೆ.

ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳ ಅಪ್ಪಣೆಯಂತೆ ಈ ವಿಶೇಷ ಪೂಜಾ ಸೇವೆ ಆಯೋಜಿಸಲಾಗಿದ್ದು, ಭಕ್ತರು ರಾಯರ ಪಾದುಕೆಗಳನ್ನು ಪೂಜಿಸಿ ಆಶೀರ್ವಾದ ಪಡೆಯುವಂತೆ ಮಠ ಮನವಿ ಮಾಡಿದೆ.

ಜುಲೈ 20ರಿಂದ ಆಗಸ್ಟ್ 28ರವರೆಗೆ ಮನೆ-ಮನೆಗೆ ಪಾದುಕೆ ಪೂಜೆ ನಡೆಯಲಿದೆ. ಪೂಜೆ ಮಾಡಿಸಿಕೊಳ್ಳಲು ಆಸಕ್ತ ಭಕ್ತರು ಮುಂಚಿತವಾಗಿ ಕಳಸಾಪೂರ ರಸ್ತೆಯ ರಾಘವೇಂದ್ರ ಶಾಖಾ ಮಠದ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಶಾಖಾ ಮಠದ ಆಚಾರ್ಯ ನಂಜನಗೂಡು ಅನಿಲ ಆಚಾರ್ಯ ಅವರನ್ನು ಮೊ. 97392 74755ರಲ್ಲಿ ಸಂಪರ್ಕಿಸಬಹುದಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img