ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಲಕ್ಕುಂಡಿಯ ಚೇತನ್ ಕರಾಟೆ ಕ್ಲಬ್ನಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ಇತ್ತೀಚೆಗೆ ಗದಗದ ಕನಕ ಭವನದಲ್ಲಿ ಗೋಲ್ಡನ್ ಕರಾಟೆ ಕ್ಲಬ್ ಆಶ್ರಯದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.
ಕುಮಿತೆ ಹಾಗೂ ಕಾಟಾ ವಿಭಾಗದಲ್ಲಿ ಸಮರ್ಥ ಕೌಜಗೇರಿ, ಚೇತನಕುಮಾರ ಮುಂದೇಲಿ ದ್ವಿತೀಯ ಸ್ಥಾನ, ದೀಕ್ಷಾ ಮುಂದೇಲಿ ತೃತೀಯ ಸ್ಥಾನ, ಪ್ರದ್ಯುಮ್ನ ತಿಮ್ಮಾಪೂರ ಕುಮಿತೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ತೃತೀಯ ಸ್ಥಾನ, ಜೀವನ್ ರಾಯಣ್ಣವರ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ, ವಿನಯ ಚಬ್ಬರಭಾವಿ ಕುಮಿತೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ತೃತೀಯ ಸ್ಥಾನ, ವರುಣ ಹಿರೇಹಾಳ ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ, ಪ್ರಿಯಾಂಕ ನಂದಪ್ಪನವರ ಹಾಗೂ ಉಮೇರಾ ಯು.ಎನ್. ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ, ವಿರಾಟ್ ಚಬ್ಬರಭಾವಿ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ ಹಾಗೂ ನಾಗರಾಜ ಕಟ್ಟಿ ಕುಮಿತೆಯಲ್ಲಿ ದ್ವಿತೀಯ ಮತ್ತು ಕಾಟಾದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.
ಸಾಧನೆಗೈದ ಕ್ರೀಡಾಪಟುಗಳನ್ನು ಅಭಿನಂದಿಸಲು ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಡಿಒ ಅಮೀರನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಪೂಜಾರ, ನೀಲಕಂಠ ಮುಕ್ಕಣವರ, ಅಶೋಕ ಬೂದಿಹಾಳ ಹಾಗೂ ಉಸ್ಮಾನಲಿ ನಮಾಜಿ ಅವರು ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಶಿಹಾನ್ ಹಬೀಬ ಹಾಗೂ ಗಂಗಾಧರ ಸಾಸ್ವಿಹಳ್ಳಿ ಅವರ ಸೇವೆಯನ್ನು ಗಣ್ಯರು ಶ್ಲಾಘಿಸಿದರು.



