ಕೋಲಾರ: ಗಂಡನನ್ನು ಕೊಂದು ಪತ್ನಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಕೋಲಾರ ತಾಲ್ಲೂಕು ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ನಾರಾಯಣಸ್ವಾಮಿ (68) ಕೊಲೆಯಾದ ಪತಿಯಾಗಿದ್ದು, ಜಗದಾಂಭ (58) ಕೊಲೆ ಮಾಡಿದ ಪತ್ನಿಯಾಗಿದ್ದಾರೆ.
ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ನಿದ್ರೆ ಮಾಡಿದ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಜಮೀನು ಮಾರಾಟ ಮಾಡಿದ ಹಣ ಕೊಟ್ಟಿಲ್ಲ ಹಾಗೂ ಇರುವ ಜಮೀನನ್ನು ಮಾರಾಟ ಮಾಡುತ್ತಾನೆಂದು ಕೊಲೆ ಮಾಡಲಾಗಿದೆಯಂತೆ.
ಇಷ್ಟು ದಿನ ಪತಿ ಮತ್ತು ಪತ್ನಿ ಪ್ರತ್ಯೇಕವಾಗಿಯೇ ಇದ್ದರು. ಆದರೆ ಹಣಕ್ಕಾಗಿ ಕಳೆದ ಎರಡು ಮೂರು ದಿನದಿಂದ ಪುಸಲಾಯಿಸಿ ತೋಟದ ಮನೆಗೆ ಕೆರತಂದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಇನ್ನೂ ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



