ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಒಕ್ಕಲಗೇರಿ ಓಣಿಯ ಗ್ರಾಮದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಐತಿಹಾಸಿಕ ಹರಿಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಏರ್ಪಡಿಸಿರುವ ಮಹಾ ಅನ್ನಪ್ರಸಾದ ಸೇವೆಗೆ ಬಿಜೆಪಿ ಯುವ ಮುಖಂಡ ವಸಂತ ಪಡಗದ ಅವರು ಭಕ್ತಿಸೇವೆಯಾಗಿ ಅಕ್ಕಿ ಸಮರ್ಪಿಸಿದ್ದಾರೆ.
18 ವರ್ಷಗಳ ಬಳಿಕ ವಿಜೃಂಭಣೆಯಿಂದ ನಡೆಯುತ್ತಿರುವ ಹರಿಜಾತ್ರಾ ಮಹೋತ್ಸವ ಆ.18ರಿಂದ 28ರವರೆಗೆ ನಡೆಯುತ್ತಿದ್ದು, ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಪ್ರತಿದಿನ ದಾಸೋಹದ ವ್ಯವಸ್ಥೆ ಮಾಡಲಾಗಿದೆ.
ಮಹಾ ಅನ್ನಪ್ರಸಾದಕ್ಕೆ ಅಗತ್ಯವಿರುವ ಅಕ್ಕಿಯನ್ನು ಶುಕ್ರವಾರದಿಂದ ಸತತ ಏಳು ದಿನಗಳ ಕಾಲ ವಸಂತ ಪಡಗದ ಅವರು ಭಕ್ತಿಸೇವೆಯಾಗಿ ಒದಗಿಸಲಿದ್ದಾರೆ. ಇದರ ಮೊದಲ ಹಂತವಾಗಿ ಗುರುವಾರ 50ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ಜಾತ್ರಾ ಸಮಿತಿಯ ಪ್ರಮುಖರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿನೋದ ಮೊರಬದ, ಪ್ರವೀಣ ಕರಿಬಿಷ್ಟಿ, ಮೋಹನ ವರವಿ, ಸುನೀಲ ಮುದೇನಗುಡಿ, ಸೋಮು ಮುಳಗುಂದ, ಬಸವರಾಜ ತುಪ್ಪದ, ಕುಮಾರ ಮಾರನಬಸರಿ, ಶ್ರೀಕಾಂತ ರಾಮಗಿರಿ, ಪ್ರವೀಣ ಹಂದೇಲಿ, ವಿನಾಯಕ ಹೊರಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“18 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮ ದೇವಿಯರ ಹರಿಜಾತ್ರೋತ್ಸವದಲ್ಲಿ ವಸಂತ ಪಡಗದ ಹಾಗೂ ಗೆಳೆಯರು ಮಹಾಪ್ರಸಾದಕ್ಕೆ ಅಗತ್ಯವಿರುವ ಅಕ್ಕಿಯನ್ನು ಭಕ್ತಿಸೇವೆಯಾಗಿ ನೀಡುತ್ತಿದ್ದಾರೆ. ಊರಿನ ಗುರು-ಹಿರಿಯರು ಹಾಗೂ ಜಾತ್ರಾ ಸಮಿತಿಯ ಸಹಕಾರದಿಂದ ಈ ಸೇವೆ ನಡೆಯುತ್ತಿದೆ.”
— ವಿನೋದ ಮೊರಬದ



