HomeIndia Newsನೇಪಾಳ ಪ್ರವಾಹ ಎಫೆಕ್ಟ್: ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಹೈ ಅಲರ್ಟ್ ಘೋಷಣೆ

ನೇಪಾಳ ಪ್ರವಾಹ ಎಫೆಕ್ಟ್: ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಹೈ ಅಲರ್ಟ್ ಘೋಷಣೆ

For Dai;y Updates Join Our whatsapp Group

ನವದೆಹಲಿ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಅಧಿಕಾರಿಗಳು ಗಡಿ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ನೇಪಾಳದಲ್ಲಿ ಉಂಟಾಗಿರುವ ವಿನಾಶಕಾರಿ ಪ್ರವಾಹಕ್ಕೆ ಈವರೆಗೆ ಕನಿಷ್ಠ 160ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ನೈಸರ್ಗಿಕ ವಿಕೋಪದಿಂದಾಗಿ ನೆರೆಯ ಭಾರತೀಯ ರಾಜ್ಯಗಳಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ಮುಂದಿನ 24 ಗಂಟೆಗಳ ಕಾಲ ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಿಗೆ ಪ್ರವಾಹದ ಹೈಅಲರ್ಟ್ ನೀಡಲಾಗಿದೆ.

ಪ್ರವಾಹದ ಪರಿಣಾಮ ನದಿ ನೀರಿನ ಮಟ್ಟ ಹೆಚ್ಚಾಗುವ ಭೀತಿಯಿದ್ದು, ಬಿಹಾರದ 9 ಜಿಲ್ಲೆಗಳಾದ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲಗಂಜ್, ಮುಜಾಫರ್‌ಪುರ, ಸೀವನ್, ಸರಣ್, ಶಿಯೋಹರ್, ಸೀತಾಮರ್ಹಿ, ವೈಶಾಲಿ ಹಾಗೂ ಉತ್ತರ ಪ್ರದೇಶದ 7 ಜಿಲ್ಲೆಗಳಾದ ಮಹಾರಾಜ್‌ಗಂಜ್, ಕುಶಿನಗರ, ಪಿಲಿಭಿತ್, ಶ್ರಾವಸ್ತಿ, ಬಲರಾಮಪುರ, ಸಿದ್ಧಾರ್ಥನಗರ, ಗೋರಖ್‌ಪುರ ಹಾಗೂ ಉತ್ತರಾಖಂಡದ ಗಡಿ ಜಿಲ್ಲೆಯಾದ ಚಂಪಾವತ್‌ದಲ್ಲಿ ಅಲರ್ಟ್ ಘೋಷಿಸಲಾಗಿದೆ.

ನೇಪಾಳದಲ್ಲಿರುವ ಭೋಟೆಕೋಶಿ ನದಿ ತ್ರಿಶೂಲಿ ನದಿ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು, ತ್ರಿಶೂಲಿ ನದಿ ದೇವಘಾಟ್ ಬಳಿ ಕಾಳಿ ಗಂಡಕಿಯನ್ನು ಸೇರಿ ನಾರಾಯಣಿ ನದಿಯಾಗುತ್ತದೆ. ಇದು ಭಾರತ ಪ್ರವೇಶಿಸಿದಾಗ ಗಂಡಕ್ ಎಂದು ಕರೆಯಲ್ಪಡುತ್ತದೆ. ಹೀಗಾಗಿ ನೇಪಾಳದ ನದಿಗಳಲ್ಲಿ ಒಳಹರಿವು ಹೆಚ್ಚಾದರೆ ಅದು ಗಂಡಕ್ ನದಿ ಮೇಲೆ ಪರಿಣಾಮ ಬೀರುತ್ತದೆ.

ಸದ್ಯಕ್ಕೆ ನೇಪಾಳ ಪ್ರವಾಹದಿಂದಾಗಿ ಗಂಡಕ್ ಮತ್ತು ನಾರಾಯಣಿ ನದಿಗಳಲ್ಲಿ, ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img