• About
  • Advertise
  • Privacy & Policy
  • Contact
Saturday, November 7, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಬರಕ್ಕೆ ಡೆಡ್‌ಲೈನ್; ನೀರಿಗೆ 50 ವರ್ಷ! ಎಚ್.ಕೆ. ಪಾಟೀಲರಿಗೆ ಅನಿಲ ಮೆಣಸಿನಕಾಯಿ ಪ್ರಶ್ನೆ

Vijaya Sakshi News Desk by Vijaya Sakshi News Desk
September 21, 2026
in Gadag News, Politics News
ಬರಕ್ಕೆ ಡೆಡ್‌ಲೈನ್; ನೀರಿಗೆ 50 ವರ್ಷ! ಎಚ್.ಕೆ. ಪಾಟೀಲರಿಗೆ ಅನಿಲ ಮೆಣಸಿನಕಾಯಿ ಪ್ರಶ್ನೆ
0
SHARES
5
VIEWS
Share on Facebook

ಗದಗ: ಅಕ್ಟೋಬರ್ 10ರೊಳಗೆ ಗದಗ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿರಿಯ ರಾಜಕಾರಣಿ ಹಾಗೂ ಶಾಸಕ ಎಚ್.ಕೆ. ಪಾಟೀಲರು ನೀಡಿರುವ ಹೇಳಿಕೆ ಸ್ವಾಗತಾರ್ಹ. ಆದರೆ, ಗದಗ–ಬೆಟಗೇರಿ ಅವಳಿ ನಗರದ ಜನರ ದಶಕಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ಅವರು ಇದೇ ರೀತಿಯ ಗಡುವು ಏಕೆ ನೀಡಲಿಲ್ಲ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ–ಬೆಟಗೇರಿ ಅವಳಿ ನಗರದಲ್ಲಿ ದಶಕಗಳಿಂದಲೂ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ನಗರದ ಹಲವು ಪ್ರದೇಶಗಳಲ್ಲಿ 20ರಿಂದ 30 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವ ಬಗ್ಗೆ ನಾಗರಿಕರಿಂದ ದೂರುಗಳು ಕೇಳಿಬರುತ್ತಿವೆ. ನೀರಿಗಾಗಿ ಮಹಿಳೆಯರು, ಮಕ್ಕಳು, ಹಿರಿಯರು ಹಾಗೂ ಬಡ ಕುಟುಂಬಗಳು ಪರದಾಡುವ ಪರಿಸ್ಥಿತಿ ಇನ್ನೂ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.

ಎಚ್.ಕೆ. ಪಾಟೀಲರ ಕುಟುಂಬವು ಹಲವು ದಶಕಗಳಿಂದ ಗದಗ ಜಿಲ್ಲೆಯ ರಾಜಕೀಯದಲ್ಲಿ ಪ್ರಮುಖ ಸ್ಥಾನದಲ್ಲಿದೆ. ಎಚ್.ಕೆ. ಪಾಟೀಲರು ಹಲವು ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇಷ್ಟೊಂದು ದೀರ್ಘ ರಾಜಕೀಯ ಅನುಭವ ಮತ್ತು ಅಧಿಕಾರದ ಅವಕಾಶಗಳಿದ್ದರೂ ಗದಗ–ಬೆಟಗೇರಿ ನಗರದ ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಅಂತಿಮ ಪರಿಹಾರ ಏಕೆ ಸಿಕ್ಕಿಲ್ಲ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಅನಿಲ ಮೆಣಸಿನಕಾಯಿ ಆಗ್ರಹಿಸಿದ್ದಾರೆ.

ಬರಗಾಲ ಘೋಷಣೆಯಾಗದಿದ್ದರೆ ರಾಜೀನಾಮೆ ನೀಡುವುದಾಗಿ ಗಡುವು ನೀಡಿರುವ ಎಚ್.ಕೆ. ಪಾಟೀಲರು, ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕಾಗಿ ಜನರು ಹಲವು ವರ್ಷಗಳಿಂದ ಪರದಾಡುತ್ತಿರುವಾಗ ಇದೇ ರೀತಿಯ ಗಡುವು ಏಕೆ ನೀಡಲಿಲ್ಲ? ಮಹಿಳೆಯರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲೂ ರಾಜೀನಾಮೆಯ ಮಾತು ಏಕೆ ಕೇಳಿಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ  ಗದಗ ಬರ ಘೋಷಣೆಗೆ ಡೆಡ್‌ಲೈನ್; ಎಚ್.ಕೆ. ಪಾಟೀಲ್ ಸ್ಫೋಟಕ ಘೋಷಣೆ!

*ಜನರ ಪ್ರಶ್ನೆಗಳಿಗೆ ಉತ್ತರ ಎಲ್ಲಿದೆ?*

ಗದಗ–ಬೆಟಗೇರಿ ನಗರಕ್ಕೆ ನಿಯಮಿತವಾಗಿ ಕುಡಿಯುವ ನೀರು ಪೂರೈಸುವ ಶಾಶ್ವತ ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ? ಕಳೆದ ಹಲವು ದಶಕಗಳಲ್ಲಿ ನೀರಿನ ಯೋಜನೆಗಳಿಗೆ ಎಷ್ಟು ಹಣ ಮಂಜೂರಾಗಿದೆ, ಎಷ್ಟು ಖರ್ಚಾಗಿದೆ? ಯೋಜನೆಗಳ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಅವಳಿ ನಗರಕ್ಕೆ 24×7 ನೀರು ಪೂರೈಸುವ ಯೋಜನೆಗೆ ನಿಗದಿತ ಕಾಲಮಿತಿ ಏನು ಎಂಬುದನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಕ್ಟೋಬರ್ 10ರೊಳಗೆ ಬರಗಾಲ ಘೋಷಣೆಯಾಗದಿದ್ದರೆ ರಾಜೀನಾಮೆ ನೀಡುವುದಾಗಿ ಎಚ್.ಕೆ. ಪಾಟೀಲರು ನೀಡಿರುವ ಭರವಸೆಯನ್ನು ನಿಜವಾಗಿಯೂ ಪಾಲಿಸುತ್ತಾರೆಯೇ ಎಂಬುದನ್ನೂ ಜನರು ಗಮನಿಸುತ್ತಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳಿದ್ದಾರೆ.

ಬರಪೀಡಿತ ರೈತರಿಗೆ ಪರಿಹಾರ ದೊರೆಯುವುದು ಅಗತ್ಯ. ಅದೇ ರೀತಿ ಗದಗ–ಬೆಟಗೇರಿ ಅವಳಿ ನಗರದ ದಶಕಗಳ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ದೊರೆಯಬೇಕು. ಕೇವಲ ರಾಜೀನಾಮೆಯ ಎಚ್ಚರಿಕೆ, ಗಡುವು ಹಾಗೂ ರಾಜಕೀಯ ಹೇಳಿಕೆಗಳಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಜನತೆಗೆ ಬೇಕಿರುವುದು ಘೋಷಣೆಗಳಲ್ಲ, ನೀರು. ಭರವಸೆಗಳಲ್ಲ, ಸಮಯಬದ್ಧ ಶಾಶ್ವತ ಯೋಜನೆ ಎಂದು ಅನಿಲ ಮೆಣಸಿನಕಾಯಿ ಕಿಡಿಕಾರಿದ್ದಾರೆ.

ಬರಗಾಲಕ್ಕೆ ರಾಜೀನಾಮೆಯ ಗಡುವು ನೀಡಿದವರು, 50 ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗದಗ–ಬೆಟಗೇರಿ ಜನರಿಗಾಗಿ ಇದುವರೆಗೆ ಏಕೆ ರಾಜೀನಾಮೆ ನೀಡಲಿಲ್ಲ?
— ಅನಿಲ ಮೆಣಸಿನಕಾಯಿ

Tags: AnilgadaganewsHkpatilmenasinakayiVijayasakshi
ShareSendShare
Previous Post

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ರೂ. ವಂಚನೆ: ಮೂವರು ಅಂತಾರಾಜ್ಯ ಸೈಬರ್ ವಂಚಕರು ಅರೆಸ್ಟ್

Next Post

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡಗೆ ಹೊಸ ಬ್ಯಾರಕ್‌; ಇಂದು ಜಾಮೀನು ಅರ್ಜಿ ವಿಚಾರಣೆ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಕೊಲೆ ಆರೋಪಿ ಪವಿತ್ರಾ ನೆನೆದು ಮಗಳ ಭಾವುಕ ಪೋಸ್ಟ್!

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡಗೆ ಹೊಸ ಬ್ಯಾರಕ್‌; ಇಂದು ಜಾಮೀನು ಅರ್ಜಿ ವಿಚಾರಣೆ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

‘ಬಿಜೆಪಿಯಲ್ಲಿ ಸಿಎಂ ಆಗುವ ಗಂಡಸರು ಇಲ್ವಾ?’; ಹೆಚ್‌ಡಿಕೆ ವಿರುದ್ಧ ಬಾಲಕೃಷ್ಣ ವಾಗ್ದಾಳಿ

November 7, 2026
ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಬಳಿಕ ರವಿಶಂಕರ್, ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ; ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ

November 7, 2026
ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ! ಹಣ, ಚಿನ್ನದ ಉಂಗುರಕ್ಕಾಗಿ ವೃದ್ಧೆಯ ಕೊಲೆ

ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ! ಹಣ, ಚಿನ್ನದ ಉಂಗುರಕ್ಕಾಗಿ ವೃದ್ಧೆಯ ಕೊಲೆ

November 7, 2026
ಜೇವರ್ಗಿಯಿಂದ ಯಾದಗಿರಿಗೆ ಬರುತ್ತಿದ್ದ ಕಾರು ಅಪಘಾತ; ನಾಲ್ವರು ಯುವಕರ ದಾರುಣ ಅಂತ್ಯ!

ಜೇವರ್ಗಿಯಿಂದ ಯಾದಗಿರಿಗೆ ಬರುತ್ತಿದ್ದ ಕಾರು ಅಪಘಾತ; ನಾಲ್ವರು ಯುವಕರ ದಾರುಣ ಅಂತ್ಯ!

November 7, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

‘ಬಿಜೆಪಿಯಲ್ಲಿ ಸಿಎಂ ಆಗುವ ಗಂಡಸರು ಇಲ್ವಾ?’; ಹೆಚ್‌ಡಿಕೆ ವಿರುದ್ಧ ಬಾಲಕೃಷ್ಣ ವಾಗ್ದಾಳಿ

November 7, 2026
ರೇಣುಕಾಸ್ವಾಮಿ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಬಳಿಕ ರವಿಶಂಕರ್, ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ; ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ

November 7, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper