HomecinemaBiggboss13: ಮಿಡ್ ವೀಕ್ ಎಲಿಮಿನೇಷನ್! ಯಾರು ಊಹಿಸದ ಸ್ಪರ್ಧಿ ಔಟ್?

Biggboss13: ಮಿಡ್ ವೀಕ್ ಎಲಿಮಿನೇಷನ್! ಯಾರು ಊಹಿಸದ ಸ್ಪರ್ಧಿ ಔಟ್?

For Dai;y Updates Join Our whatsapp Group

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ಪ್ರಕ್ರಿಯೆ ಕುತೂಹಲ ಮೂಡಿಸಿದೆ.

ಮನೆಯ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ತಾಂಡವ್ ರಾಮ್ ಅವರು ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಎವಿಕ್ಟ್ ಆಗಿದ್ದಾರೆ ಎಂದು ಪ್ರಸಾರವಾದ ದೃಶ್ಯಗಳು ಸೂಚಿಸಿವೆ.

ಆದರೆ ತಾಂಡವ್ ರಾಮ್ ನಿಜವಾಗಿಯೂ ಮನೆಯಿಂದ ಹೊರಗೆ ಹೋಗಿದ್ದಾರೆಯೇ ಎಂಬುದು ಇನ್ನೂ ಸಂಪೂರ್ಣವಾಗಿ ಖಚಿತವಾಗಿಲ್ಲ. ಕಾರಣ, ಪ್ರಸಾರವಾದ ಎಪಿಸೋಡ್‌ನಲ್ಲಿ ತಾಂಡವ್ ಅವರು ಎವಿಕ್ಟ್ ಕಾರ್ಡ್ ಹಿಡಿದುಕೊಂಡಿರುವ ದೃಶ್ಯ ಮಾತ್ರ ತೋರಿಸಲಾಗಿದ್ದು, ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವ ದೃಶ್ಯವನ್ನು ತೋರಿಸಿಲ್ಲ.

ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಆರಂಭಿಕ ಟಾಸ್ಕ್‌ನಲ್ಲಿ ಅಡ್ವಾಂಟೇಜ್ ಪಡೆದಿದ್ದ ಕಾವ್ಯಾ, ಆಸಿಯಾ, ಧನುಶ್ ಹಾಗೂ ಶಾಸ್ತ್ರಿ ಅವರಿಗೆ ವಿಶೇಷ ಅವಕಾಶ ನೀಡಲಾಗಿತ್ತು. ಎಲಿಮಿನೇಷನ್‌ನಿಂದ ಪಾರಾಗಲು ಈ ನಾಲ್ವರು ಇತರ ನಾಮಿನೇಟ್ ಸ್ಪರ್ಧಿಗಳಿಂದ ಶೇ.50ರಷ್ಟು ಮತಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬೇಕಿತ್ತು.

ಈ ಕಾರ್ಯಕ್ಕಾಗಿ ನಾಲ್ವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಅಲ್ಲಿನ ಚರ್ಚೆಗಳನ್ನು ಮನೆಯ ಇತರ ನಾಮಿನೇಟ್ ಸ್ಪರ್ಧಿಗಳಿಗೆ ತೋರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಾರಿಗೆ ಹೆಚ್ಚು ಮತಗಳು ಬಂದಿರಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡು, ಅವರಿಂದ ಮತಗಳನ್ನು ಪಡೆದುಕೊಳ್ಳುವ ಬಗ್ಗೆ ಸ್ಪರ್ಧಿಗಳು ಚರ್ಚೆ ನಡೆಸಿದರು.

ತಾಂಡವ್ ರಾಮ್ ಒಳ್ಳೆಯ ಸ್ಪರ್ಧಿಯಾಗಿದ್ದು, ಅವರಿಗೆ ಹೆಚ್ಚಿನ ಮತಗಳು ಬಂದಿರಬಹುದು ಎಂದು ಧನುಶ್ ಲೆಕ್ಕಾಚಾರ ಹಾಕಿದ್ದರು ಎನ್ನಲಾಗಿದೆ. ತಾಂಡವ್ ಅವರಿಂದ ಶೇ.50ರಷ್ಟು ಮತಗಳನ್ನು ಪಡೆದುಕೊಂಡರೆ ತಮ್ಮ ತಂಡದ ಸದಸ್ಯರು ಎಲಿಮಿನೇಷನ್‌ನಿಂದ ಪಾರಾಗಬಹುದು ಎಂಬುದು ಈ ಲೆಕ್ಕಾಚಾರದ ಹಿಂದಿನ ಉದ್ದೇಶವಾಗಿತ್ತು.

ಆದರೆ ಈ ಲೆಕ್ಕಾಚಾರವೇ ಧನುಶ್‌ಗೆ ತಿರುಗೇಟು ನೀಡಿದಂತಾಗಿದೆ. ತಾಂಡವ್ ಅವರೇ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಎವಿಕ್ಟ್ ಆಗಿರುವುದಾಗಿ ಎಪಿಸೋಡ್‌ನಲ್ಲಿ ತೋರಿಸಲಾಗಿದೆ.

ತಾಂಡವ್ ರಾಮ್ ಮತ್ತು ಸೌಂದರ್ಯಾ ಕೊನೆಯ ಹಂತದಲ್ಲಿ ಉಳಿದಾಗ ಮನೆಯ ವಾತಾವರಣ ಭಾವುಕವಾಗಿತ್ತು. ತಾಂಡವ್ ಅವರನ್ನು ಉಳಿಸಿಕೊಳ್ಳುವಂತೆ ಗಗನ್ ಕಣ್ಣೀರಿಡುತ್ತಾ ಬಿಗ್‌ಬಾಸ್‌ಗೆ ಮನವಿ ಮಾಡಿದರು. ಆದರೆ ಅಂತಿಮವಾಗಿ ಸೌಂದರ್ಯಾ ಉಳಿದುಕೊಂಡಿದ್ದು, ತಾಂಡವ್ ಎವಿಕ್ಟ್ ಆದ ದೃಶ್ಯ ಪ್ರಸಾರವಾಯಿತು.

ತಾಂಡವ್ ಎವಿಕ್ಟ್ ಕಾರ್ಡ್ ತೋರಿಸುತ್ತಿದ್ದಂತೆ ಮನೆಯ ಹಲವು ಸ್ಪರ್ಧಿಗಳು ಭಾವುಕರಾಗಿ ಕಣ್ಣೀರು ಹಾಕಿದರು. ಆದರೆ ತಾಂಡವ್ ಮಾತ್ರ ನಗುತ್ತಾ, ಸಹ ಸ್ಪರ್ಧಿಗಳನ್ನು ಸಮಾಧಾನಪಡಿಸುತ್ತಿರುವುದು ಗಮನ ಸೆಳೆಯಿತು.

ಇದೀಗ ತಾಂಡವ್ ನಿಜವಾಗಿಯೂ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆಯೇ ಅಥವಾ ಇದು ಎಲಿಮಿನೇಷನ್ ಪ್ರಕ್ರಿಯೆಯ ಭಾಗವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಸುದೀಪ್ ಅವರಿಂದ ಅಧಿಕೃತವಾಗಿ ದೃಢೀಕರಣ ದೊರೆಯುವವರೆಗೂ ತಾಂಡವ್ ಎಲಿಮಿನೇಷನ್ ಕುರಿತು ಕುತೂಹಲ ಮುಂದುವರಿಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img