HomeLife Styleಬಾಗಿಲು ಲಾಕ್‌ ಮಾಡಿದ್ರೂ ಮತ್ತೆ ಮತ್ತೆ ಚೆಕ್‌ ಮಾಡ್ತೀರಾ? ಈ ಅಭ್ಯಾಸದ ಹಿಂದೆ ಇರಬಹುದು OCD!

ಬಾಗಿಲು ಲಾಕ್‌ ಮಾಡಿದ್ರೂ ಮತ್ತೆ ಮತ್ತೆ ಚೆಕ್‌ ಮಾಡ್ತೀರಾ? ಈ ಅಭ್ಯಾಸದ ಹಿಂದೆ ಇರಬಹುದು OCD!

For Dai;y Updates Join Our whatsapp Group

ಮನೆಯಿಂದ ಹೊರಗೆ ಹೋಗುವಾಗ ಬಾಗಿಲು ಲಾಕ್‌ ಆಗಿದೆಯೇ, ಗ್ಯಾಸ್‌ ಒಲೆ ಆರಿಸಲಾಗಿದೆಯೇ ಎಂದು ಪರಿಶೀಲಿಸುವುದು ಸಾಮಾನ್ಯ.

ಆದರೆ ಒಮ್ಮೆ ಖಚಿತಪಡಿಸಿಕೊಂಡ ಬಳಿಕವೂ ಮತ್ತೆ ಮತ್ತೆ ಅನುಮಾನ ಕಾಡಿ ಅದೇ ವಸ್ತುವನ್ನು ಪದೇಪದೇ ಪರಿಶೀಲಿಸುತ್ತಿದ್ದರೆ, ಇದನ್ನು ಸಾಮಾನ್ಯ ಅಭ್ಯಾಸ ಎಂದು ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ.

ಒಸಿಡಿ ಕುರಿತು ತಜ್ಞರಾಗಿರುವ ಥೆರಪಿಸ್ಟ್‌ ಹಾಗೂ ಪುನರ್ವಸತಿ ಮನೋವಿಜ್ಞಾನಿ ಶ್ಯಾಮ್‌ ಗುಪ್ತಾ ಅವರ ಪ್ರಕಾರ, ಸಾಮಾನ್ಯ ಪರಿಶೀಲನೆ ಒಂದು ಪ್ರಶ್ನೆಗೆ ಉತ್ತರ ಸಿಕ್ಕ ಬಳಿಕ ಮುಗಿಯುತ್ತದೆ. ಆದರೆ ಒತ್ತಾಯಪೂರ್ವಕ ಪರಿಶೀಲನೆಯಲ್ಲಿ ಖಚಿತತೆ ಸಿಕ್ಕಿದ್ದರೂ ಮತ್ತೆ ಅನುಮಾನ ಮೂಡುತ್ತದೆ. ಏನಾದರೂ ಕೆಟ್ಟದ್ದು ಸಂಭವಿಸಬಹುದು ಎಂಬ ಭಯವನ್ನು ಕಡಿಮೆ ಮಾಡಿಕೊಳ್ಳಲು ವ್ಯಕ್ತಿ ಪದೇಪದೇ ಪರಿಶೀಲಿಸುತ್ತಿರಬಹುದು.

ಯಾವಾಗ ಗಮನ ಹರಿಸಬೇಕು?

ಬಾಗಿಲು, ಗ್ಯಾಸ್‌ ಅಥವಾ ಇತರ ವಸ್ತುಗಳನ್ನು ಪದೇಪದೇ ಪರಿಶೀಲಿಸುವುದು ಒಸಿಡಿಯ ಸಾಮಾನ್ಯ ರೂಪಗಳಲ್ಲಿ ಒಂದಾಗಿರಬಹುದು. ಪ್ರತಿ ಬಾರಿ ಪರಿಶೀಲಿಸಿದ ಬಳಿಕ ಕೆಲಕಾಲ ನೆಮ್ಮದಿ ಸಿಕ್ಕರೂ ಮತ್ತೆ ಅದೇ ಅನುಮಾನ ಮೂಡುವುದು ಗಮನಿಸಬೇಕಾದ ಪ್ರಮುಖ ಲಕ್ಷಣವಾಗಿದೆ.

ಪರಿಶೀಲನೆಗೆ ದಿನದ ಹೆಚ್ಚಿನ ಸಮಯ ಹೋಗುವುದು, ಮನೆಯಿಂದ ಹೊರಟ ಬಳಿಕ ಮತ್ತೆ ಬಾಗಿಲು ನೋಡಲು ಹಿಂದಿರುಗುವುದು, ರಾತ್ರಿ ಎದ್ದು ಈಗಾಗಲೇ ಪರಿಶೀಲಿಸಿರುವ ವಸ್ತುಗಳನ್ನು ಮತ್ತೆ ನೋಡುವುದು ಅಥವಾ ಕುಟುಂಬದವರಿಂದ ಪದೇಪದೇ ಖಚಿತಪಡಿಸಿಕೊಳ್ಳುವುದು ಸಮಸ್ಯೆಯ ಸೂಚನೆಯಾಗಿರಬಹುದು.

ಒಮ್ಮೆ ಪರಿಶೀಲಿಸದೆ ಬಿಟ್ಟರೆ ದೊಡ್ಡ ಅನಾಹುತ ಸಂಭವಿಸುತ್ತದೆ, ಅದಕ್ಕೆ ತಾನೇ ಕಾರಣನಾಗುತ್ತೇನೆ ಎಂಬ ಭಯವೂ ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಈ ವರ್ತನೆಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ತೀವ್ರ ಆತಂಕ ಉಂಟಾದರೂ ಗಮನ ಹರಿಸುವುದು ಅಗತ್ಯ.

ಚಿಕಿತ್ಸೆಯಿಂದ ನಿಯಂತ್ರಿಸಬಹುದು:

ಒಸಿಡಿಗೆ ಚಿಕಿತ್ಸೆ ನೀಡುವಲ್ಲಿ ಎಕ್ಸ್‌ಪೋಸರ್‌ ಆ್ಯಂಡ್‌ ರೆಸ್ಪಾನ್ಸ್‌ ಪ್ರಿವೆನ್ಷನ್‌ (ERP) ಒಳಗೊಂಡ ಅರಿವಿನ ವರ್ತನಾ ಚಿಕಿತ್ಸೆಯನ್ನು ಬಳಸಲಾಗುತ್ತದೆ. ತಜ್ಞರ ಮಾರ್ಗದರ್ಶನದಲ್ಲಿ, ಉದಾಹರಣೆಗೆ ಬಾಗಿಲನ್ನು ಒಮ್ಮೆ ಪರಿಶೀಲಿಸಿದ ಬಳಿಕ ಮತ್ತೆ ಹಿಂದಿರುಗಿ ನೋಡದಿರುವಂತಹ ಅಭ್ಯಾಸವನ್ನು ಕ್ರಮೇಣ ಬೆಳೆಸಲಾಗುತ್ತದೆ.

ಆರಂಭದಲ್ಲಿ ಆತಂಕ ಹೆಚ್ಚಾಗಬಹುದು. ಆದರೆ ಸೂಕ್ತ ಚಿಕಿತ್ಸೆಯ ಮೂಲಕ ಆ ಆತಂಕವನ್ನು ನಿಭಾಯಿಸಲು ಕಲಿಯಲು ಸಾಧ್ಯವಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img