ಬೆಂಗಳೂರು: ರಾಜಧಾನಿ ಬೆಂಗಳೂರಿನ ಮತ್ತಿಕೆರೆಯಲ್ಲಿ ಗ್ಯಾಸ್ ಸಿಲಿಂಡರ್ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಗ್ಯಾಸ್ ಪೂರೈಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚನ್ನಪ್ಪ ಗಾರ್ಡನ್ನ ಎರಡು ಮನೆಗಳಿಗೆ ಸರಬರಾಜು ಮಾಡಲಾಗಿದ್ದ ಸಿಲಿಂಡರ್ಗಳ ತೂಕ ಪರಿಶೀಲಿಸಿದಾಗ, 30 ಕೆಜಿ ಇರಬೇಕಾದ ಸಿಲಿಂಡರ್ಗಳಲ್ಲಿ 27 ಕೆಜಿ ತೂಕ ದಾಖಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮತ್ತಿಕೆರೆಯ ಚನ್ನಪ್ಪ ಗಾರ್ಡನ್ನಲ್ಲಿ ಇಂಡಿಯನ್ ಗ್ಯಾಸ್ನ ಮೋಹನ್ ಏಜೆನ್ಸಿ ವತಿಯಿಂದ ಎರಡು ಮನೆಗಳಿಗೆ ಸಿಲಿಂಡರ್ಗಳನ್ನು ವಿತರಿಸಲಾಗಿತ್ತು. ಬಳಿಕ ಸ್ಥಳೀಯರು ಸಿಲಿಂಡರ್ಗಳ ತೂಕ ಪರಿಶೀಲಿಸಿದಾಗ ವ್ಯತ್ಯಾಸ ಕಂಡುಬಂದಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಏಜೆನ್ಸಿ ಸಿಬ್ಬಂದಿಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಗೋವಿಂದ ರಾಜು, ಮೋಹನ್ ಗ್ಯಾಸ್ ಏಜೆನ್ಸಿಯಿಂದ ಪೂರೈಕೆಯಾದ ಸಿಲಿಂಡರ್ಗಳ ತೂಕ ಪರಿಶೀಲಿಸಿದಾಗ ಕಡಿಮೆ ಪ್ರಮಾಣದ ಗ್ಯಾಸ್ ಇರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಸಿಲಿಂಡರ್ಗಳಲ್ಲಿ ಕಡಿಮೆ ಪ್ರಮಾಣದ ಗ್ಯಾಸ್ ಪೂರೈಸುವವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆದರೆ, ಸಿಲಿಂಡರ್ಗಳ ತೂಕದಲ್ಲಿನ ವ್ಯತ್ಯಾಸಕ್ಕೆ ನಿಖರ ಕಾರಣವೇನು ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.



