Homecinemaವಿಜಯದಶಮಿಯಂದು ಎರಡನೇ ಮಗಳ ಹೆಸರು ರಿವೀಲ್ ಮಾಡಿದ ತಾರಾ ದಂಪತಿ!

ವಿಜಯದಶಮಿಯಂದು ಎರಡನೇ ಮಗಳ ಹೆಸರು ರಿವೀಲ್ ಮಾಡಿದ ತಾರಾ ದಂಪತಿ!

For Dai;y Updates Join Our whatsapp Group

ಬಾಲಿವುಡ್‌ನ ಮುದ್ದಾದ ತಾರಾ ಕುಟುಂಬದ ಅಪರೂಪದ ಫೋಟೋವೊಂದು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದು, ಮಗಳಿಗೆ ‘ದೇವಿ ಪಡುಕೋಣೆ ಸಿಂಗ್’ ಎಂದು ನಾಮಕರಣ ಮಾಡಿದ್ದಾರೆ.

ವಿಜಯದಶಮಿಯ ಶುಭ ಸಂದರ್ಭದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ಎರಡನೇ ಮಗುವಿನ ಆಗಮನದ ಬಳಿಕ ಮೊದಲ ಬಾರಿಗೆ ನಾಲ್ವರೂ ಒಟ್ಟಿಗಿರುವ ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡು, “ಪ್ರೀತಿ ಮತ್ತು ಸಮೃದ್ಧಿ… ದೇವಿ ಪಡುಕೋಣೆ ಸಿಂಗ್” ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಇಡೀ ಕುಟುಂಬ ಬಂಗಾರದ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದೆ.

ಇನ್ನು ಚಿತ್ರದಲ್ಲಿರುವ ಒಂದು ಮುದ್ದಾದ ಕ್ಷಣ ಎಲ್ಲರ ಮನ ಗೆದ್ದಿದೆ. ತಂದೆ ರಣವೀರ್ ಸಿಂಗ್ ಮಗಳು ದುವಾಳನ್ನು ಎತ್ತಿಕೊಂಡಿದ್ದರೆ, ದುವಾ ತನ್ನ ಪುಟ್ಟ ತಂಗಿ ದೇವಿಗೆ ಪ್ರೀತಿಯಿಂದ ಮುತ್ತಿಡುತ್ತಿದ್ದಾಳೆ. ತಾಯಿ ದೀಪಿಕಾ ಕೂಡ ಕಂದಮ್ಮನನ್ನು ಎದೆಗೆ ಅಪ್ಪಿಕೊಂಡಿದ್ದಾರೆ. ಈ ಸುಂದರ ದೃಶ್ಯ ಅಭಿಮಾನಿಗಳ ಮನಸೂರೆಗೊಂಡಿದೆ.

ಫೋಟೋ ಹಂಚಿಕೊಂಡ ಬೆನ್ನಲ್ಲೇ ಬಾಲಿವುಡ್ ಗಣ್ಯರು ಶುಭಾಶಯ ತಿಳಿಸಿದ್ದಾರೆ. ನಟಿಯರಾದ ಶರ್ವರಿ, ಮೃಣಾಲ್ ಠಾಕೂರ್, ಭೂಮಿ ಪೆಡ್ನೇಕರ್, ಪ್ರಜ್ಞಾ ಜೈಸ್ವಾಲ್ ಹಾಗೂ ಗಾಯಕಿ ಹರ್ಷದೀಪ್ ಕೌರ್ ಸೇರಿದಂತೆ ಹಲವರು ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

2026ರ ಸೆಪ್ಟೆಂಬರ್ 19ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದ ದೀಪಿಕಾ-ರಣವೀರ್ ದಂಪತಿ, ಇದೀಗ ಮಗಳ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಕುಟುಂಬದ ಈ ಮುದ್ದಾದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img