ಬೆಂಗಳೂರು: ಮನೆಯೊಳಗೆ ನಾಗರಹಾವು ಕಾಣಿಸಿಕೊಂಡರೆ ಸಾಕು, ಜನರು ಭಯದಿಂದ ಬೆಚ್ಚಿಬೀಳುತ್ತಾರೆ.
ಅಂತಹದರಲ್ಲಿ, ಅಣ್ಣ-ತಂಗಿ ಮಲಗಿದ್ದ ಹಾಸಿಗೆಯಲ್ಲೇ ನಾಗರಹಾವು ಪತ್ತೆಯಾದ ಘಟನೆ ಬೆಂಗಳೂರಿನ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ರಾತ್ರಿ ಮನೆಯ ಕಿಟಕಿಯ ಮೂಲಕ ಒಳಗೆ ಬಂದಿದ್ದ ನಾಗರಹಾವು, ಅಣ್ಣ-ತಂಗಿ ಮಲಗಿದ್ದ ಹಾಸಿಗೆಯ ದಿಂಬಿನ ಕೆಳಗೆ ಸೇರಿಕೊಂಡಿತ್ತು ಎನ್ನಲಾಗಿದೆ.
ರಾತ್ರಿ ವೇಳೆ ಏನೋ ಓಡಾಡಿದ ಅನುಭವವಾದರೂ, ಇಲಿ ಇರಬಹುದೆಂದು ಭಾವಿಸಿ ಅಣ್ಣ-ತಂಗಿ ನಿರ್ಲಕ್ಷಿಸಿದ್ದಾರೆ. ಬೆಳಿಗ್ಗೆ ಹಾಸಿಗೆ ತೆಗೆಯುವಾಗ ದಿಂಬಿನ ಕೆಳಗೆ ನಾಗರಹಾವು ಇರುವುದು ಕಂಡು ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ತಕ್ಷಣವೇ ಉರಗ ಸಂರಕ್ಷಕ ನಾಗೇಂದ್ರ ಅವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ನಾಗೇಂದ್ರ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿದ್ದಾರೆ.
ರಾತ್ರಿ ಇಡೀ ನಾಗರಹಾವು ಇದ್ದ ಹಾಸಿಗೆಯಲ್ಲೇ ಅಣ್ಣ-ತಂಗಿ ಮಲಗಿದ್ದ ಘಟನೆ ಇದೀಗ ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿದೆ.










