• About
  • Advertise
  • Privacy & Policy
  • Contact
Friday, November 27, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಚಳಿಗಾಲದ ಮಂಜಿನಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರ; ಚಾಲಕರಿಗೆ KSRTCಯಿಂದ ಮಹತ್ವದ ಸೂಚನೆ!

Vijaya Sakshi News Desk by Vijaya Sakshi News Desk
November 27, 2026
in Karnataka News
ಮುಷ್ಕರಕ್ಕೆ ಹೋದ್ರೆ ಸಂಬಳ ಕಟ್! KSRTC ನೌಕರರಿಗೆ ಅಕ್ರಮ್ ಪಾಷಾ ಖಡಕ್ ವಾರ್ನಿಂಗ್
0
SHARES
0
VIEWS
Share on Facebook

ಬೆಂಗಳೂರು: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣದಿಂದಾಗಿ ರಸ್ತೆಗಳಲ್ಲಿ ಗೋಚರತೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲಕರು ಪಾದಚಾರಿಗಳು, ಪ್ರಯಾಣಿಕರು ಹಾಗೂ ಇತರ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸೂಚನೆ ನೀಡಿದೆ.

ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಬೆಳಗಿನ ಜಾವ ಮಂಜು ಹೆಚ್ಚಾಗಿರುವ ಸಂದರ್ಭದಲ್ಲಿ ವಾಹನ ಚಾಲನೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಚಾಲಕರಿಗೆ ಸಲಹೆ ನೀಡಿದೆ. ಅಪಘಾತಗಳನ್ನು ತಡೆಗಟ್ಟಲು ವಾಹನದ ನಿರ್ವಹಣೆ ಮತ್ತು ಸುರಕ್ಷಿತ ಚಾಲನೆಗೆ ಸಂಬಂಧಿಸಿದ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ವಾಹನ ಚಾಲನೆಗೂ ಮುನ್ನ ಈ ಪರಿಶೀಲನೆ ಕಡ್ಡಾಯ

ಪ್ರಯಾಣ ಆರಂಭಿಸುವ ಮೊದಲು ವಾಹನದ ಹೆಡ್‌ಲೈಟ್, ಇಂಡಿಕೇಟರ್, ಬ್ರೇಕ್‌ಲೈಟ್ ಹಾಗೂ ವೈಪರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಮಂಜು ಅಥವಾ ಕಡಿಮೆ ಗೋಚರತೆ ಇರುವ ಸಂದರ್ಭದಲ್ಲಿ ಹೈ-ಬೀಮ್ ಬದಲಿಗೆ ಲೋ-ಬೀಮ್ ಲೈಟ್ ಬಳಸಬೇಕು. ಜೊತೆಗೆ ವಾಹನದ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು KSRTC ಸೂಚಿಸಿದೆ.

ವಾಹನಗಳ ನಡುವೆ ಸಾಕಷ್ಟು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ವಾಹನವನ್ನು ನಿಲ್ಲಿಸಲು ಬೇಕಾಗುವ ಅಂತರವನ್ನು ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಬೇಕು. ಅನಗತ್ಯ ಓವರ್‌ಟೇಕ್, ಅಪಾಯಕಾರಿ ಲೇನ್ ಬದಲಾವಣೆ, ಹಠಾತ್ ಬ್ರೇಕ್ ಹಾಕುವುದು ಹಾಗೂ ವೇಗವನ್ನು ಪದೇಪದೇ ಹೆಚ್ಚಿಸುವುದನ್ನು ತಪ್ಪಿಸಬೇಕು ಎಂದು ತಿಳಿಸಿದೆ.

ಆಯಾಸದ ಸ್ಥಿತಿಯಲ್ಲಿ ಚಾಲನೆ ಮಾಡಬೇಡಿ

ದೀರ್ಘ ಪ್ರಯಾಣದ ವೇಳೆ ಚಾಲಕರು ಅಗತ್ಯ ವಿಶ್ರಾಂತಿ ಪಡೆಯಬೇಕು. ಆಯಾಸ ಅಥವಾ ನಿದ್ರಾಹೀನ ಸ್ಥಿತಿಯಲ್ಲಿ ವಾಹನ ಚಲಾಯಿಸಬಾರದು. ಮುಂಜಾನೆ ಮತ್ತು ರಾತ್ರಿ ವೇಳೆ ಮಂಜಿನ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜಾಗರೂಕತೆ ವಹಿಸಬೇಕು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ವಾಹನಗಳ ಸಮೀಪ ವಾಹನ ಚಲಾಯಿಸುವಾಗ ವಿಶೇಷ ಎಚ್ಚರಿಕೆ ಅಗತ್ಯ ಎಂದು ಸೂಚಿಸಲಾಗಿದೆ.

ಇದರ ಜೊತೆಗೆ ವಾಹನದ ಟೈರ್‌ಗಳ ಸ್ಥಿತಿ ಮತ್ತು ಗಾಳಿಯ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು. ಮಳೆ, ಮಂಜು ಅಥವಾ ಜಾರುವ ರಸ್ತೆಗಳು, ತಿರುವುಗಳು ಹಾಗೂ ಘಾಟ್ ರಸ್ತೆಗಳಲ್ಲಿ ವೇಗವನ್ನು ಕಡಿಮೆ ಮಾಡಿಕೊಂಡು ಎಚ್ಚರಿಕೆಯಿಂದ ಚಾಲನೆ ಮಾಡಬೇಕು.

ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ

ಬಸ್‌ಗಳಲ್ಲಿ ಪ್ರಯಾಣಿಕರು ಹತ್ತುವಾಗ ಮತ್ತು ಇಳಿಯುವಾಗ ವಾಹನವನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರವೇ ಮುಂದಿನ ಪ್ರಯಾಣ ಆರಂಭಿಸಬೇಕು ಎಂದು ಚಾಲಕರಿಗೆ ಸೂಚಿಸಲಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಚಾಲನೆಗೂ ಮೊದಲು ಮತ್ತು ಪ್ರಯಾಣ ಮುಗಿದ ಬಳಿಕ ವಾಹನದ ಸುರಕ್ಷತಾ ತಪಾಸಣೆ ನಡೆಸುವುದು ಕಡ್ಡಾಯವಾಗಿದೆ.

ವಾಹನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ದೋಷವನ್ನು ಸರಿಪಡಿಸಿದ ಬಳಿಕವಷ್ಟೇ ವಾಹನವನ್ನು ಮತ್ತೆ ಚಾಲನೆ ಮಾಡಬೇಕು. ಅಲ್ಲದೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅನಧಿಕೃತ ಸ್ಥಳಗಳಲ್ಲಿ ನಿಲುಗಡೆ ಮಾಡದಂತೆ KSRTC ಸೂಚನೆ ನೀಡಿದೆ.

Tags: BreakingNewsFog Driving TipsKarnatakaKarnataka TransportksrtcKSRTC DriversKSRTC GuidelinesNewsHeadlinesVijayasakshivijayasakshinewsWinter Driving Safety
ShareSendShare
Previous Post

ಮೇಕೆದಾಟು ಯೋಜನೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ; ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿ

Next Post

ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

November 27, 2026
ಮುಷ್ಕರಕ್ಕೆ ಹೋದ್ರೆ ಸಂಬಳ ಕಟ್! KSRTC ನೌಕರರಿಗೆ ಅಕ್ರಮ್ ಪಾಷಾ ಖಡಕ್ ವಾರ್ನಿಂಗ್

ಚಳಿಗಾಲದ ಮಂಜಿನಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರ; ಚಾಲಕರಿಗೆ KSRTCಯಿಂದ ಮಹತ್ವದ ಸೂಚನೆ!

November 27, 2026
ಕಾವೇರಿ ನೀರು ವಿವಾದ ಮತ್ತೆ ಸುಪ್ರೀಂ ಅಂಗಳಕ್ಕೆ: ಕರ್ನಾಟಕಕ್ಕೆ ತಕ್ಷಣ 4.536 ಟಿಎಂಸಿ ನೀರು ಬಿಡಲು ತಮಿಳುನಾಡು ಆಗ್ರಹ

ಮೇಕೆದಾಟು ಯೋಜನೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ; ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿ

November 27, 2026
ಶತ್ರುಗಳ ಡ್ರೋನ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಜ್ಜು; ಸ್ವದೇಶಿ ‘ಭಾರ್ಗವಾಸ್ತ್ರ’ ಪರೀಕ್ಷೆ ಪೂರ್ಣ

ಶತ್ರುಗಳ ಡ್ರೋನ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಜ್ಜು; ಸ್ವದೇಶಿ ‘ಭಾರ್ಗವಾಸ್ತ್ರ’ ಪರೀಕ್ಷೆ ಪೂರ್ಣ

November 27, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

ನಾಲ್ಕು ವರ್ಷದ ಪ್ರೀತಿಗೆ ದುರಂತ ಅಂತ್ಯ; ಲಾಡ್ಜ್ʼನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ!

November 27, 2026
ಮುಷ್ಕರಕ್ಕೆ ಹೋದ್ರೆ ಸಂಬಳ ಕಟ್! KSRTC ನೌಕರರಿಗೆ ಅಕ್ರಮ್ ಪಾಷಾ ಖಡಕ್ ವಾರ್ನಿಂಗ್

ಚಳಿಗಾಲದ ಮಂಜಿನಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರ; ಚಾಲಕರಿಗೆ KSRTCಯಿಂದ ಮಹತ್ವದ ಸೂಚನೆ!

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper