ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ..! ಅನೈತಿಕ ಸಂಬಂಧ ಕೊಲೆಗೆ ಕಾರಣವಾಯ್ತಾ..!?

0
Spread the love

ಬೆಂಗಳೂರು: ಬೆಂಗಳೂರಿನಲ್ಲಿ ಪತ್ನಿಯಿಂದಲೇ ಪತಿಯ ಭೀಕರ ಹತ್ಯೆಯಾಗಿರುವ ಘಟನೆ ನಡೆದಿದೆ.  ಉಮೇಶ್ ದಾಮಿ (27) ಕೊಲೆಯಾದ ಪತಿಯಾಗಿದ್ದು, ಈತನನ್ನು ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ. ಈ ಘಟನೆ ಹುಳಿಮಾವು ಸಮೀಪದ ಕಾಲೇಜಿನಲ್ಲಿ ನಡೆದಿದೆ.

Advertisement

ಈ ದಂಪತಿ ಕಾಲೇಜೊಂದರಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಘಟನೆ ನಡೆದಂದು ಉಮೇಶ್ ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ. ಪಾರ್ಟಿ ಮುಗಿಸಿಕೊಂಡು ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಆ ವೇಳೆ ಮನಿಷಾ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಕೋಪಗೊಂಡ ಉಮೇಶ್ ಆಕೆಯ ಜೊತೆಗೆ ಜಗಳವಾಡಿದ್ದಾನೆ

ಅನೈತಿಕ ಸಂಬಂಧ ಹೊಂದಿರೋ ಬಗ್ಗೆ ಅನುಮಾನದಿಂದ ಪತ್ನಿ ಜೊತೆ ಗಲಾಟೆ ಮಾಡಿದ್ದಾನೆ. ಈ ಜಗಳ ವಿಕೋಪಕ್ಕೆ ಹೋದಾಗ ಮನಿಷಾ, ಚಾಕು ತೆಗೆದುಕೊಂಡು ಉಮೇಶ್ ದಾಮಿಗೆ ಇರಿದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಉಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ಉಮೇಶ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತ ಆರೋಪಿ ಮನಿಷಾಳನ್ನ ಬಂಧಿಸಿ ಹುಳಿಮಾವು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಹುಳಿಮಾವು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here