HomePolitics Newsಕನಕ ಭವನ ಸಮಾಜೋಪಯೋಗಿಯಾಗಲಿ

ಕನಕ ಭವನ ಸಮಾಜೋಪಯೋಗಿಯಾಗಲಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಕ್ಷೇತ್ರದಲ್ಲಿ ಈ ಹಿಂದೆ ನಾನಾ ವರ್ಗಗಳ ಕಲ್ಯಾಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿದ್ದೇನೆ. ಆಯಾ ಸಮುದಾಯಗಳ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಅನುಕೂಲ
ಕಲ್ಪಿಸುವ ದೃಷ್ಟಿಯಿಂದ ಸರ್ಕಾರದಿಂದ ಅನುದಾನ ನೀಡಿದ್ದು, ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಕನಕ ಭವನವನ್ನು ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ನುಡಿದರು.

ಸ್ಥಳೀಯ ಸಿಬಿಎಸ್‌ಸಿ ಶಾಲೆಯ ಎದುರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರದಲ್ಲಿ ತಾಲೂಕು ಕುರುಬರ ಸಂಘದಿಂದ ಶನಿವಾರ ನಡೆದ ಕನಕ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖಂಡ ಎಚ್.ಎಸ್. ಸೋಂಪೂರ ಮಾತನಾಡಿ, ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ಹಲವಾರು ಬಾರಿ ಭೂಮಿ ಪೂಜೆ ನಡೆದರೂ ಸಹ ಕನಕ ಭವನ ನಿರ್ಮಾಣವಾಗಿರಲಿಲ್ಲ. ಆದರೆ, ಶಾಸಕ ಜಿ.ಎಸ್.ಪಾಟೀಲ ಇಂದು ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಿದ್ದು ಸಂತಸ ತಂದಿದೆ. ಎರಡು ವರ್ಷದಲ್ಲಿ ಕನಕ ಭವನ ನಿರ್ಮಾಣವಾಗಲಿದೆ ಎಂದರು.

ಸಮಾಜದ ಮುಖಂಡ ಕಳಕಪ್ಪ ಕಂಬಳಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರೂ ಸಂಘಟಿತರಾಗೋಣ ಎಂದರು.

ಕಲಬುರ್ಗಿ ವಿಭಾಗ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ, ಕಾಗಿನಲೆ ಶಾಖಾಮಠ ಬಾದಿಮನಾಳದ ಶಿವಶಿದ್ದೇಶ್ವರ ಸ್ವಾಮೀಜಿ, ನಿಡಗುಂದಿ ಧರ್ಮರಮಠ ಷಣ್ಣಮುಖಪ್ಪಜ್ಜನವರ, ಪ್ಯಾಟಿ ಧರ್ಮರಮಠ ಸಕ್ರಪ್ಪಜ್ಜ ಧರ್ಮರ, ಗುಳಗುಳಿ ಯೋಗಾನಂದ ಆಶ್ರಮದ ಋಷಿಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸಮಾಜದ ಮುಖಂಡ ವಿ.ಆರ್. ಗುಡಿಸಾಗರ, ಕುರಬರ ಸಂಘದ ತಾಲೂಕಾಧ್ಯಕ್ಷ ಅಂದಪ್ಪ ಬಿಚ್ಚೂರ, ಕೆ.ಎಸ್. ಕೊಡತಗೇರಿ, ನೀಲಪ್ಪ ಬೂದಿಹಾಳ, ದ್ರಾಮಣ್ಣ ಪ್ರಭಣ್ಣವರ, ಶೈಲಜಾ ಚಿಲ್‌ಝರಿ, ಶರಣಪ್ಪ ಬೆಟಗೇರಿ, ಬಸವರಾಜ ಬೆನಕನವಾರಿ, ನಾಗೇಶ ಲಕ್ಕಲಕಟ್ಟಿ, ರಮೇಶ ವದೆಗೋಳ ಸೇರಿ ಇತರರು ಇದ್ದರು.

ಮೊದಲ ಬಾರಿ ಶಾಸಕನಾಗಿದ್ದ ವೇಳೆ ರೋಣ ಪಟ್ಟಣದಲ್ಲಿ ಕನಕ ಭವನ ನಿರ್ಮಾಣ ಮಾಡಲಾಗಿದೆ. ಈಗ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವುದರ ಜತೆಗೆ ರೂ.೨೫ ಲಕ್ಷ ಅನುದಾವನ್ನು ಬಿಡುಗಡೆ ಮಾಡಿರುವ ಆದೇಶ ಪ್ರತಿಯನ್ನು ಹಸ್ತಾಂತರಿಸಲಾಗಿದೆ. ಸಮಾಜದ ದಾನಿಗಳಿಂದ ರೂ.೨೫ ಲಕ್ಷ ಹಣವನ್ನು ಸಂಗ್ರಹಿಸದ ಬಳಿಕ ಸರ್ಕಾರದಿಂದ ಮತ್ತೆ ಕನಕ ಭವನಕ್ಕೆ ರೂ.೨೫ ಲಕ್ಷ ಹಣವನ್ನು ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img