Homecultureಶಿವಯೋಗಮಂದಿರದ ಜಾತ್ರಾಮಹೋತ್ಸವ

ಶಿವಯೋಗಮಂದಿರದ ಜಾತ್ರಾಮಹೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದಲ್ಲಿ ಲಿಂ.ಹಾನಗಲ್ಲ ಕುಮಾರ ಮಹಾಶಿವಯೋಗಿಗಳವರ 94ನೇ ಪುಣ್ಯ ಸ್ಮರಣೋತ್ಸವ, ಜಾತ್ರಾಮಹೋತ್ಸ, ಅಡ್ಡಪಲ್ಲಕ್ಕಿ ಮಹೋತ್ಸವವು ಮಾ.3 ಮತ್ತು 4ರಂದು ಜರುಗಲಿದೆ.

ಮಾ. 3ರಂದು ಬೆಳಿಗ್ಗೆ 6 ಗಂಟೆಗೆ ಲಿಂ. ಚನ್ನಬಸವ ಶಿವಯೋಗಿ ಹಾಗೂ ಲಿಂ. ಶಿವಬಸವ ಸ್ವಾಮೀಜಿಗಳ ಗದ್ದುಗೆಗೆ ಮಹಾರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಜರುಗಲಿದೆ. ಬೆಳಗ್ಗೆ 11 ಗಂಟೆಗೆ ಶ್ರೀ ಕುಮಾರೇಶ್ವರರ ಭಾವಚಿತ್ರದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠ ತಲುಪಲಿದೆ.

ಮದ್ಯಾಹ್ನ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದ್ದು, ಡಾ. ಪ್ರಶಾಂತ ಧನ್ನೂರ, ಡಾ. ಅನ್ನಪೂರ್ಣ ಧನ್ನೂರ, ಡಾ. ಅರುಣ ಇಂಗಳೆ ಭಾಗಹಿಸಲಿದ್ದಾರೆ. ಮದ್ಯಾಹ್ನ 2 ಗಂಟೆಗೆ ಮಹಾಗಣಾರಾಧನೆ ಜರುಗಲಿದೆ.

ಸಂಜೆ 7 ಗಂಟೆಗೆ ಶ್ರೀ ಕುಮಾರೇಶ್ವರ ಸಂಸ್ಮರಣಾ ಸಭೆ ಜರುಗಲಿದೆ. ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಜೀಗೇರಿ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸುವರು. ಮಾಜಿ ಸಚಿವ ಕಳಕಪ್ಪ ಬಂಡಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಶಿವಾನಂದ ಮಠದ, ಮುತ್ತಣ್ಣ ಕಡಗದ ಆಗಮಿಸಲಿದ್ದಾರೆ. ಶಿಕ್ಷಕ ಎಸ್.ಎಸ್. ನರೇಗಲ್ಲ ಉಪನ್ಯಾಸ ನೀಡಲಿದ್ದಾರೆ. ಕೊತಬಾಳದ ಅರುಣೋದಯ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಮಾ. 4ರಂದು ಸಂಜೆ 5.30ಕ್ಕೆ ಶ್ರೀ ಕುಮಾರೇಶ್ವರ ಮಹಾರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಧಾರ್ಮಿಕ ಹಾಗೂ ಸನ್ಮಾನ ಸಮಾರಂಭ ಜರುಗಲಿದ್ದು, ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹರ್ಲಾಪೂರ ಶ್ರೀ ಕೊಟ್ಟೂರೇಶ್ವರ ಮಠದ ಡಾ. ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಚಂದ್ರಶೇಖರ ದೇವರು ಸಮ್ಮುಖ ವಹಿಸುವರು. ಶಾಸಕ ಜಿ.ಎಸ್. ಪಾಟೀಲ, ಸಿದ್ದಣ್ಣ ಬಂಡಿ, ಶರಣಪ್ಪ ಬೆಟಗೇರಿ, ಮಂಜುಳಾ ರೇವಡಿ, ಗೀತಾ ಕುಕನೂರ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಮಾ. 4ರಂದು ಬೆಳಿಗ್ಗೆ 9 ಗಂಟೆಗೆ ಶಿವಾಪೂರ ಅಂಕಲಗಿ ಅಡವಿಸಿದ್ಧೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಗಳ ಅಡ್ಡ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ರೋಣ ರಾಜೀವಗಾಂಧಿ ಆಯುರ್ವೇದ ಕಾಲೇಜಿನ ಸಹಯೋಗದಲ್ಲಿ ಬೆಳಿಗ್ಗೆ 11 ಗಂಟೆಗೆ `ನಮ್ಮ ಆರೋಗ್ಯ ನಮ್ಮ ಕಾಳಜಿ’ ಉಚಿತ ಆಯುರ್ವೆದ ಆರೋಗ್ಯ ತಪಾಸಣಾ ಶಿಬಿರ ಜರುಗಲಿದೆ. ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಉದ್ಘಾಟಿಸುವರು. ಪ್ರಾಚಾರ್ಯ ಡಾ. ಐ.ಬಿ. ಕೊಟ್ಟೂರಶೆಟ್ಟರ, ಡಾ. ಎಸ್.ಸಿ. ಸರ್ವಿ, ಡಾ. ಬಿ.ಎಸ್. ಗೌಡಪ್ಪಗೌಡ್ರ, ಬಸವರಾಜ ಹಿರೇಮಠ, ಮಹಾಂತೇಶ ಹಿರೇಮಠ ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img