Homecultureಶಿವ ಸ್ಮರಣೆಯಿಂದ ಕಷ್ಟಗಳು ದೂರ

ಶಿವ ಸ್ಮರಣೆಯಿಂದ ಕಷ್ಟಗಳು ದೂರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮನುಷ್ಯ ಹುಟ್ಟಿನಿಂದ ಸಾಯುವ ತನಕ ಪ್ರೀತಿಯಿಂದ ಒಬ್ಬರಿಗೊಬ್ಬರು ಆಸರೆಯಾಗಿ ನಮ್ಮ ಜೀವನವನ್ನು ಪ್ರೀತಿಯಿಂದ ಜೀವಿಸಿದಾಗ ಬದುಕು ಸುಂದರವಾಗುತ್ತದೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಡಾ.ಪದ್ಮಾಜಿ ಹೇಳಿದರು.

ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದ ಆವರಣದಲ್ಲಿ ಮಾಹಾಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಿಂದ ಜರುಗಿದ ದ್ವಾದಶ ಜ್ಯೋರ್ತಿಲಿಂಗ ಉದ್ಘಾಟಿಸಿ ಮಾತನಾಡಿದರು.

ಭಗವಂತ ನಮಗೆ ಎಲ್ಲವನ್ನೂ ನೀಡಿದ್ದಾನೆ. ಈ ಮನುಷ್ಯ ಜನ್ಮದಲ್ಲಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ನಂಬಿಕೆಯಿಂದ ಬದುಕಿ ಬಾಳಿದ ಮಹಿನಿಯರು ನಮಗೆಲ್ಲಾ ದಾರಿ ದೀಪವಾಗಿದ್ದು, ಆದಿ ಕಾಲದಿಂದಲೂ ಎಲ್ಲರೂ ಶಿವನ ಆರಾಧನೆಯಿಂದ ತಮ್ಮ ಸುಖ ಜೀವನ ನಡೆಸಿದ್ದಾರೆ. ಶಿವನನ್ನು ನಿತ್ಯ ನೆನೆಯುವುದರಿಂದ ನಮಗೆ ಬಂದ ಕಷ್ಟಗಳು ದೂರವಾಗುತ್ತವೆ ಎಂದರು.

ನೇತೃತ್ವವನ್ನು ರಾಜಯೋಗಿನಿ ಬಿ.ಕೆ. ಶಿವಾನಿ ವಹಿಸಿದ್ದರು. ಅಧ್ಯಕ್ಷತೆಯನ್ನು ಗೌರಮ್ಮಾ ಬಡ್ನಿ ವಹಿಸಿದ್ದರು. ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಗೀತಾ ಜಾಧಾವ, ಕವಿತಾ ದೊಟಿಕಲ್, ಪ್ರಕಾಶ ಮದ್ದಿನ, ರಾಜಯೋಗಿನಿ ನಾಗಲಾಂಬಿಕೆ ಅಕ್ಕ, ಸುಮನ್ ಚವಡಿ, ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img