HomePolitics Newsಕಾಂತೇಶ ಈಶ್ವರಪ್ಪಗೆ ಹಾವೇರಿ ಕ್ಷೇತ್ರದ ಟಿಕೆಟ್ ನೀಡಿ

ಕಾಂತೇಶ ಈಶ್ವರಪ್ಪಗೆ ಹಾವೇರಿ ಕ್ಷೇತ್ರದ ಟಿಕೆಟ್ ನೀಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ಇಡೀ ಜೀವನವನ್ನೇ ಸಮರ್ಪಿಸಿಕೊಂಡ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ ಈಶ್ವರಪ್ಪ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಲೇಬೇಕು ಎಂದು ತಾಲೂಕಿನ ಬಾಲೆಹೊಸೂರ ಗ್ರಾಮದ ಪಕ್ಷದ ಕಾರ್ಯಕರ್ತರು ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ದೇವಪ್ಪ ಮತ್ತೂರ, ಕೆ.ಎಸ್. ಈಶ್ವರಪ್ಪ ಮತ್ತು ಕಾಂತೇಶರಿಗೆ ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಅವಕಾಶ ನೀಡದಿದ್ದಾಗಲೂ ತೋರಿದ ಪಕ್ಷ ನಿಷ್ಠೆಗೆ ಇಡೀ ರಾಜ್ಯದ ಜನತೆ ಮತ್ತು ಸ್ವತಃ ಪ್ರಧಾನಮಂತ್ರಿಗಳೇ ಪ್ರಶಂಸಿಸಿದ್ದಾರೆ. ಪಕ್ಷಾಂತರ, ಪಕ್ಷದ್ರೋಹದ ಕೆಲಸ ಮಾಡದೇ ರಾಜಕಾರಣಿಗಳಿಗೆ ಮಾದರಿಯಾದ ಈಶ್ವರಪ್ಪ ಅವರು ಪಕ್ಷ ಸಂಘಟನೆಗಾಗಿ ಅವಿರತ ಶ್ರಮಿಸಿದ್ದಾರೆ. ಇದೀಗ ಅವರ ಮಗನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷದ ಹೈಕಮಾಂಡ್ ಅವಕಾಶ ನೀಡಬೇಕು. ಅಂದಾಗ ಮಾತ್ರ ಪಕ್ಷದ ನಿಷ್ಠಾವಂತರಿಗೆ ಬೆಲೆ ಸಿಗುತ್ತದೆ ಇಲ್ಲದಿದ್ದರೆ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕಾಗುತ್ತದೆ ಎಂದರು.

ಈ ವೇಳೆ ನಿಂಗಪ್ಪ ಪ್ಯಾಟಿ, ಶಿವಲಿಂಗಪ್ಪ ಮಿಳ್ಳಿ, ನಾಗಯ್ಯ ಮಠಪತಿ, ಮಾರುದ್ರಪ್ಪ ಬಡಿಗೇರ, ವಿರಪಾಕ್ಷಪ್ಪ ಮರಳಿಹಳ್ಳಿ, ಪರಶುರಾಮ ಮೈಲಾರಿ, ನೀಲಪ್ಪ ಮಾಯಕೊಂಡ, ದೇವಪ್ಪ ಬಡಿಗೇರ, ಸಿದ್ದಪ್ಪ ನೆನಗನಹಳ್ಳಿ, ರವಿ ಮೂಲಿಮನಿ, ರಮೇಶ ಜೋಗೇರ, ಸಂಜೀವ ಸಾಲಿ, ಹೂವಪ್ಪ ದೀಪಾವಳಿ, ಮಾರುತಿ ಸತ್ಯಮ್ಮನವರ ಸೇರಿ ಪಕ್ಷದ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img