HomeGadag Newsಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯ ಮಕ್ಕಳಿಗೆ ಶ್ರೀ ಸಿವಾಂಚಿ ಓಸವಾಲ ಜೈನ್ ಸಂಘ ಗದಗ, ಶ್ರೀ ಸಿವಾಂಚಿ ಓಸವಾಲ ಮಹಿಳಾ ಜೈನ್ ಸಂಘ ಗದಗ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷ ಜಯಂತಿಲಾಲ ಬನ್ಸಾಲಿ ಮಾತನಾಡಿ, ಯಾವುದೇ ಮಗು ಮಧ್ಯದಲ್ಲಿ ಶಾಲೆ ಬಿಡದೆ ಉತ್ತಮವಾದ ಶಿಕ್ಷಣ ಪಡೆದು ಒಳ್ಳೆಯ ನಾಗರಿಕರಾಗಬೇಕು ಎಂದರು.

ಶಾಲೆ ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್. ಮಾತನಾಡಿ, ಶಾಲಾ ಮಕ್ಕಳಿಗೆ ಸಹಾಯ ಮಾಡುವುದು ಎಂದರೆ ದೇವರ ಸೇವೆ ಮಾಡಿದ ಹಾಗೆ ಎಂದು ಅಭಿಪ್ರಾಯಪಟ್ಟರಲ್ಲದೆ, ಸಂಘಟಕರನ್ನು ಅಭಿನಂದಿಸಿದರು.

ನಿರ್ಭಯಾಲಾಲ ಹುಂಡಿಯಾ, ಪ್ರವೀಣ ಸಂಕಲೇಚಾ, ಅರವಿಂದ ಬಂದಾ, ಮುಖೇಶ ಜೈನ್, ಅರವಿಂದ ಬನ್ಸಾಲಿ, ವರ್ಧಮಾನ ಜೈನ್, ಶ್ರೀ ಸಿವಾಂಚಿ ಓಸವಾಲ ಮಹಿಳಾ ಸಂಪದ ಕಾರ್ಯದರ್ಶಿ ಮೀನಾ ಬನ್ಸಾಲಿ, ರಿಂಕು ತಾತೇಡ, ಪ್ರೀತಿ ಲುಂಕಡ, ಶೋಭಾ ಬಾಫಣಾ, ಪಿಂಕಿ ಜೀರಾವಾಲ, ಕಮಲಾಬಾಯಿ ಜೈನ್, ಅನಿತಾ ಜೈನ್, ಮಹಿಳಾ ಸಂಪದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ, ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ, ಮಾರುತಿ ಪವಾರ, ವೆಂಕಟೇಶ್ ಲಮಾಣಿ, ಲಚ್ಚಪ್ಪ ಲಮಾಣಿ, ಸೋಮನಾಥ ಲಮಾಣಿ, ಮೌನೇಶ್ ಲಮಾಣಿ, ಬಿಸಿಯೂಟ ಸಿಬ್ಬಂದಿಗಳಾದ ಗಂಗವ್ವ ಲಮಾಣಿ, ಸಾವಿತ್ರಿ ರಾಠೋಡ, ದೇವಕ್ಕ ಲಮಾಣಿ, ಲಕ್ಷ್ಮಿ ಲಮಾಣಿ, ಶಾಂತವ್ವ ರಾಠೋಡ, ರೇಣುಕಾ ಲಮಾಣಿ, ಗೀತಾ ರಾಠೋಡ, ಶಾಲಾ ಮಕ್ಕಳು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img