ಹುಬ್ಬಳ್ಳಿ: ವಿಡಿಯೋ ಗೇಮ್ ಆಡಲು ಮೊಬೈಲ್ ಕೊಡದ ಹಿನ್ನೆಲೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಉದಯನಗರ ನಿವಾಸಿ ಸಮರ್ಥ (14) ಮೃತ ಬಾಲಕನಾಗಿದ್ದು, ಮೊಬೈಲ್ನಲ್ಲಿ ‘ಫ್ರೀ ಫೈರ್’ ಗೇಮ್ಗೆ ಹೆಚ್ಚು ಅಡಿಕ್ಟ್ ಆಗಿದ್ದಾನೆಂದು ತಿಳಿದುಬಂದಿದೆ. ಅವನು ಹೆಚ್ಚಿನ ಸಮಯವನ್ನು ಈ ಗೇಮ್ ಆಡುತ್ತಲೇ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ತಾಯಿ ಮೊಬೈಲ್ ಕಸಿದುಕೊಂಡು ಗೇಮ್ ಆಡಬಾರದೆಂದು ಬುದ್ಧಿವಾದ ಹೇಳಿದ್ದರು.
ತಾಯಿ ಮಾತಿನಿಂದ ಮನನೊಂದ ಸಮರ್ಥ ಮನೆಯ ಕೋಣೆಗೆ ತೆರಳಿ, ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



