ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಒ ಸಿ ಡಬ್ಲ್ಯೂ ಪೊಲೀಸರು ಬಂಧಿಸಿದ್ದಾರೆ. ರೋಷನ್ ಅಹಮದ್ ಅಲಿಯಾಸ್ ಬಬ್ಬನ್ ಬಂಧಿತ ಆರೋಪಿಯಾಗಿದ್ದು,
ಈ ಹಿಂದೆ ಡ್ರಗ್ ಪೆಡ್ಲಿಂಗ್ ಕೇಸ್ ನಲ್ಲಿ ಮೈಕೋ ಲೇಔಟ್ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿತ್ತು. ಡ್ರಗ್ ಪೆಡ್ಲಿಂಗ್ ಜೊತೆ ಆರೋಪಿ ಅಕ್ರಮವಾಗಿ ಮಧ್ಯ ಪ್ರದೇಶದಿಂದ ಪಿಸ್ತೂಲ್ ತಂದಿರುವ ಮಾಹಿತಿ ಇತ್ತು.
ಈ ಸಂಬಂಧ ಆರೋಪಿ ಮನೆ ಪರಿಶೀಲನೆ ಮಾಡಿದ ವೇಳೆ, ಒಂದು ಪಿಸ್ತೂಲ್ ಹಾಗೂ ನಾಲ್ಕು ಸಜೀವ ಗುಂಡುಗಳು ಪತ್ತೆಯಾಗಿದೆ. ಈ ಘಟನೆ ಸಂಬಂಧ ಆರೋಪಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.



