Home Gadag News ಶ್ರೀಮಠದ ಜಾತ್ರೆಗೆ ವಿನೂತನ ಆಹ್ವಾನ

ಶ್ರೀಮಠದ ಜಾತ್ರೆಗೆ ವಿನೂತನ ಆಹ್ವಾನ

0
ಶ್ರೀಮಠದ ಜಾತ್ರೆಗೆ ವಿನೂತನ ಆಹ್ವಾನ
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಜಾತ್ರೆಯು ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ 2025ರ ಜಾತ್ರಾ ಮಹೋತ್ಸವದ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ. ಈ ಬಾರಿ ಜ. 15, 16 ಹಾಗೂ 17ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದ ವೀಡಿಯೊದೊಂದಿಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಟ್ರೇಲರ್ ಹಾಡನ್ನು ಗವಿಮಠದ ಮುಂಭಾಗದಲ್ಲಿ ಸ್ವಚ್ಛತಾ ಸೇವೆಗೈಯುತ್ತಿರುವ ಸೇವಾ ಸಿಬ್ಬಂದಿಗಳಾದ ಲಕ್ಷಿö್ಮÃ, ನಾಗಮ್ಮ, ಬರಮವ್ವ ಶೋಭಾ, ಲಕ್ಷ್ಮವ್ವ, ಈರಮ್ಮ, ಹುಲಿಗೆಮ್ಮ, ನಾಗಮ್ಮ, ಫಕೀರಮ್ಮ, ಗುಂಡಪ್ಪ, ಮಾತಂಗೆವ್ವ ಬಿಡುಗಡೆಗೊಳಿಸಿದರು.

ಸಾಹಿತ್ಯಕ್ಕೆ ಜೀವ ತುಂಬುವ ಕಂಠಸಿರಿಯ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಈ ಹಾಡನ್ನು ಮೈದುಂಬಿ ಹಾಡಿದ್ದಾರೆ. ಈ ಹಾಡಿನಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವದ ವೈಭವದ ದೃಶ್ಯ, ಶ್ರೀ ಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ದೀರ್ಘದಂಡ ನಮಸ್ಕಾರ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ಸಾಮಾಜಿಕ ಜಾಗೃತಿ ಜಾಥಾ ಸನ್ನಿವೇಶ ಒಳಗೊಂಡಿದೆ. ತೆಪ್ಪೋತ್ಸವ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರ ಸೇವನೆ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ್ಯ ಪೂರ್ಣ ಪುಣ್ಯಕಾರ್ಯಗಳು ಇದರಲ್ಲಿ ಅಂತರ್ಗತವಾಗಿವೆ.

ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಶ್ರೀ ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ನುಡಿ ಸೇವೆಗೈಯುವುತ್ತಿರುವದು ಮತ್ತೊಂದು ವೈಶಿಷ್ಟತೆಯಾಗಿದೆ.


Spread the love

LEAVE A REPLY

Please enter your comment!
Please enter your name here