• About
  • Advertise
  • Privacy & Policy
  • Contact
Thursday, October 22, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ದಸರಾ ಮುಗಿದ ಬೆನ್ನಲ್ಲೇ ಮತ್ತೊಂದು ವಿವಾದ: ಸರ್ಕಾರಿ ಜಾಹೀರಾತಿನಲ್ಲಿ ಯತೀಂದ್ರ ಫೋಟೋ ಮಿಸ್ಸಿಂಗ್!

Vijaya Sakshi by Vijaya Sakshi
October 22, 2026
in Karnataka News
0
ದಸರಾ ಮುಗಿದ ಬೆನ್ನಲ್ಲೇ ಮತ್ತೊಂದು ವಿವಾದ: ಸರ್ಕಾರಿ ಜಾಹೀರಾತಿನಲ್ಲಿ ಯತೀಂದ್ರ ಫೋಟೋ ಮಿಸ್ಸಿಂಗ್!
0
SHARES
0
VIEWS
Share on FacebookShare on Twitter

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಒಂದರ ಹಿಂದೆ ಮತ್ತೊಂದರಂತೆ ವಿವಾದಗಳು ಭುಗಿಲೆದ್ದಿವೆ. ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಮೂವರು ಸಚಿವರನ್ನು ಪೊಲೀಸರು ತಡೆದಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಇದೀಗ ದಸರಾ ಶುಭಾಶಯಗಳ ಸರ್ಕಾರಿ ಜಾಹೀರಾತಿನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಈ ಸಂಬಂಧ ವಾರ್ತಾ ಇಲಾಖೆಯ ಅಧಿಕಾರಿಗಳ ವಿರುದ್ಧ ಅಹಿಂದ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಈ ಬಾರಿ ಮೈಸೂರು ದಸರಾ ಮಹೋತ್ಸವ ಹಲವು ವಿಶೇಷತೆಗಳೊಂದಿಗೆ 11 ದಿನಗಳ ಕಾಲ ಅದ್ಧೂರಿಯಾಗಿ ನಡೆದಿತ್ತು. ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಹಾಗೂ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ್ದವು. ಆದರೆ ದಸರಾ ಸಂಭ್ರಮ ಮುಗಿಯುತ್ತಿದ್ದಂತೆಯೇ ಕೆಲವು ಘಟನೆಗಳು ವಿವಾದಕ್ಕೆ ಕಾರಣವಾಗಿವೆ.

ಅಕ್ಟೋಬರ್ 21ರಂದು ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಮೂವರು ಸಚಿವರನ್ನು ಪೊಲೀಸ್ ಅಧಿಕಾರಿಗಳು ತಡೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ನಡುವೆಯೇ ಇದೀಗ ದಸರಾ ಸರ್ಕಾರಿ ಜಾಹೀರಾತಿನಲ್ಲಿನ ಭಾವಚಿತ್ರದ ವಿಚಾರ ಮುನ್ನೆಲೆಗೆ ಬಂದಿದೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರದ ವತಿಯಿಂದ ಪತ್ರಿಕೆಗಳಲ್ಲಿ ಪ್ರಕಟಿಸಲಾದ ಅಧಿಕೃತ ಶುಭಾಶಯಗಳ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಭಾವಚಿತ್ರಗಳನ್ನು ಬಳಸಲಾಗಿದೆ. ಆದರೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಪ್ರಕಟಿಸಿಲ್ಲ ಎಂಬುದು ಅಹಿಂದ ಸಂಘಟನೆಗಳ ಆಕ್ಷೇಪವಾಗಿದೆ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದು ಉದ್ದೇಶಪೂರ್ವಕ ನಿರ್ಲಕ್ಷ್ಯವೇ ಎಂಬ ಪ್ರಶ್ನೆಯನ್ನು ಸಂಘಟನೆಗಳು ಎತ್ತಿವೆ. ಜಾಹೀರಾತು ಸಿದ್ಧಪಡಿಸಿದ ಹಾಗೂ ಪ್ರಕಟಣೆಗೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ. ‘ಸಿದ್ದರಾಮಯ್ಯರವರ ಸಿದ್ದಾಂತಗಳಿಗೆ ಈ ಗ್ರೂಪ್’ ಎಂಬ ಫೇಸ್‌ಬುಕ್ ಪುಟದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ದಸರಾ ಶುಭಾಶಯಗಳ ಜಾಹೀರಾತಿನ ತುಣುಕನ್ನು ಹಂಚಿಕೊಳ್ಳಲಾಗಿದೆ. ಜಾಹೀರಾತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಇಲ್ಲದಿರುವುದನ್ನು ಪ್ರಶ್ನಿಸಿ ಅಧಿಕಾರಿಗಳ ನಡೆಯನ್ನು ಟೀಕಿಸಲಾಗಿದೆ.

ಇದೇ ವಿಚಾರವಾಗಿ ಮೈಸೂರಿನಲ್ಲಿ ಅಹಿಂದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಭಾವಚಿತ್ರಗಳನ್ನು ಪ್ರಕಟಿಸಿರುವ ವಾರ್ತಾ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವನ್ನು ಮಾತ್ರ ಕೈಬಿಟ್ಟಿರುವುದೇಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಜಿಲ್ಲೆಯ ಪ್ರಮುಖ ಉತ್ಸವಕ್ಕೆ ಸಂಬಂಧಿಸಿದ ಸರ್ಕಾರಿ ಜಾಹೀರಾತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕಿತ್ತು. ಆದರೆ ಅವರ ಭಾವಚಿತ್ರವನ್ನು ಪ್ರಕಟಿಸದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಜಾಹೀರಾತು ಪ್ರಕಟಣೆಯಲ್ಲಿ ಯಾವ ಅಧಿಕಾರಿಯಿಂದ ತಪ್ಪಾಗಿದೆ ಎಂಬುದನ್ನು ಪತ್ತೆಹಚ್ಚಬೇಕು. ಉಸ್ತುವಾರಿ ಸಚಿವರ ಭಾವಚಿತ್ರ ಕೈಬಿಟ್ಟಿರುವುದರ ಹಿಂದೆ ಯಾವುದಾದರೂ ಷಡ್ಯಂತ್ರವಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅಹಿಂದ ಸಂಘಟನೆಗಳು ಒತ್ತಾಯಿಸಿವೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Tags: BreakingNewsKarnatakaMysuru Dasara 2026 ControversyMysuru Dasara Government AdvertisementNewsHeadlinesVijayasakshivijayasakshinewsYathindra Siddaramaiah Photo Controversy
Previous Post

ಪತ್ನಿಯ ಮೇಲೆ ಅನುಮಾನವೇ ಕೊಲೆಗೆ ಕಾರಣವಾಯ್ತಾ? ಹೆಂಡತಿಯನ್ನು ಹತ್ಯೆಗೈದು ರಾಜಕಾಲುವೆಗೆ ಎಸೆದ ಪತಿ, 9 ದಿನಗಳ ಬಳಿಕ ಬಯಲಾದ ಸತ್ಯ!

Next Post

ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

Vijaya Sakshi

Vijaya Sakshi

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

Leave a Reply Cancel reply

Your email address will not be published. Required fields are marked *

Stay Connected test

  • 24k Followers
  • 99 Subscribers
  • Trending
  • Comments
  • Latest
ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

October 21, 2026
Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

October 21, 2026

ಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

October 18, 2026
ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

October 21, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬುಧವಾರದಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ: ಈ ಜಿಲ್ಲೆಗಳಿಗೆ ಹೈ ಅಲರ್ಟ್!

ಬೆಂಗಳೂರಿನಲ್ಲಿ ದಿಢೀರ್ ಮಳೆ ಅಬ್ಬರ: ಜಯನಗರ, ಲಾಲ್ ಬಾಗ್ ಸೇರಿ ಹಲವೆಡೆ ಧಾರಾಕಾರ ವರ್ಷಧಾರೆ

October 22, 2026
ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

October 22, 2026
ದಸರಾ ಮುಗಿದ ಬೆನ್ನಲ್ಲೇ ಮತ್ತೊಂದು ವಿವಾದ: ಸರ್ಕಾರಿ ಜಾಹೀರಾತಿನಲ್ಲಿ ಯತೀಂದ್ರ ಫೋಟೋ ಮಿಸ್ಸಿಂಗ್!

ದಸರಾ ಮುಗಿದ ಬೆನ್ನಲ್ಲೇ ಮತ್ತೊಂದು ವಿವಾದ: ಸರ್ಕಾರಿ ಜಾಹೀರಾತಿನಲ್ಲಿ ಯತೀಂದ್ರ ಫೋಟೋ ಮಿಸ್ಸಿಂಗ್!

October 22, 2026
ಪತ್ನಿಯ ಮೇಲೆ ಅನುಮಾನವೇ ಕೊಲೆಗೆ ಕಾರಣವಾಯ್ತಾ? ಹೆಂಡತಿಯನ್ನು ಹತ್ಯೆಗೈದು ರಾಜಕಾಲುವೆಗೆ ಎಸೆದ ಪತಿ, 9 ದಿನಗಳ ಬಳಿಕ ಬಯಲಾದ ಸತ್ಯ!

ಪತ್ನಿಯ ಮೇಲೆ ಅನುಮಾನವೇ ಕೊಲೆಗೆ ಕಾರಣವಾಯ್ತಾ? ಹೆಂಡತಿಯನ್ನು ಹತ್ಯೆಗೈದು ರಾಜಕಾಲುವೆಗೆ ಎಸೆದ ಪತಿ, 9 ದಿನಗಳ ಬಳಿಕ ಬಯಲಾದ ಸತ್ಯ!

October 22, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬುಧವಾರದಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ: ಈ ಜಿಲ್ಲೆಗಳಿಗೆ ಹೈ ಅಲರ್ಟ್!

ಬೆಂಗಳೂರಿನಲ್ಲಿ ದಿಢೀರ್ ಮಳೆ ಅಬ್ಬರ: ಜಯನಗರ, ಲಾಲ್ ಬಾಗ್ ಸೇರಿ ಹಲವೆಡೆ ಧಾರಾಕಾರ ವರ್ಷಧಾರೆ

October 22, 2026
ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

October 22, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
Join WhatsApp Read E-Paper
f 𝕏 WhatsApp Copy Link