ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಈದ್ ಮಿಲಾದ್ ಅಂಗವಾಗಿ ಇಲ್ಲಿಯ ಮುಸ್ಲಿಂ ಜಮಾತ್, ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ವತಿಯಿಂದ ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಹಿರೇಮಸೂತಿ ಆವರಣದಲ್ಲಿ ನಡೆದ ಶಿಬಿರವನ್ನು ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ್ಅಹ್ಮದ್ ಕಿರೀಟಗೇರಿ ಉದ್ಘಾಟಿಸಿದರು. ಹುಬ್ಬಳ್ಳಿಯ ಡಾ. ಚಂದ್ರು ಶ್ರೀಗಿರಿ ನೇತೃತ್ವದ ವೈದ್ಯರ ತಂಡ 110 ಮಂದಿಯ ಕಣ್ಣುಗಳನ್ನು ತಪಾಸಣೆ ನಡೆಸಿತು. ಈ ಪೈಕಿ 30 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅವರನ್ನು ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.
ಕಮಿಟಿ ಉಪಾಧ್ಯಕ್ಷ ದಾದಾಪೀರ ಕೊರ್ಲಹಳ್ಳಿ, ಸದಸ್ಯರಾದ ಅಲ್ಲಿಸಾಬ ನದಾಫ್, ಖಾಜಿಸಾಬ ಮುಲ್ಲಾ, ಮಹ್ಮದಸಾಬ ನದಾಫ್, ಮಹಮ್ಮದಸಾಬ ಹಂದ್ರಾಳ, ದಾವೂದ್ ಹಂದ್ರಾಳ, ಗಫರಸಾಬ ಮೂಲಿಮನಿ, ಜಲಾನಸಾಬ ಡೋಣಿ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಹೈದರಲಿ ನದಾಫ್, ಉಪಾಧ್ಯಕ್ಷ ರೀಯಾಜ್ ಮಸೂತಿ, ಕಾರ್ಯದರ್ಶಿ ಆಸ್ಪಾಕ್ ಹಮಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



