ಆನೇಕಲ್: ಬೆಸ್ಕಾಂ ಚಂದಾಪುರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಮಂದೂರು ಹಾಗೂ ಆನೇಕಲ್ ವಿದ್ಯುತ್ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜುಲೈ 22ರಂದು ಬುಧವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಸಮಂದೂರು ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಗೆ ಬರುವ ಸಮಂದೂರು, ರಾಜಾಪುರಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೇಪುರ, ಪಿ. ಗೊಲ್ಲಹಳ್ಳಿ, ತೆಲಗರಹಳ್ಳಿ, ವಾಣಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.
ಇನ್ನು ಆನೇಕಲ್ ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಯ ಆನೇಕಲ್ ಪಟ್ಟಣ, ಕಾವಲುಹೊಸಹಳ್ಳಿ, ಗೋರೇನಹಳ್ಳಿ, ಹಾಳೇನಹಳ್ಳಿ, ಹೊಂಪಲಾಘಟ್ಟ, ಚೂಡೇನಹಳ್ಳಿ, ಹೊನ್ನಕಳಶಾಪುರ, ಕರ್ಮೂರು, ಬ್ಯಾಗದದೇನಹಳ್ಳಿ, ವಿ.ಬಿ.ಎಚ್.ಸಿ ಅಪಾರ್ಟ್ಮೆಂಟ್, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.
ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳಬೇಕು ಹಾಗೂ ಬೆಸ್ಕಾಂಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.



