ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದರೂ, ಆರೋಗ್ಯದ ದೃಷ್ಟಿಯಿಂದ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನ AQI 109ಕ್ಕೆ ತಲುಪಿದ್ದು, ಸಂಖ್ಯಾಶಃ ‘ಮಧ್ಯಮ’ ಅಥವಾ ‘ಕಳಪೆ’ ಗಡಿಯಲ್ಲಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳ ಪ್ರಕಾರ ಇದು ಇನ್ನೂ ಆರೋಗ್ಯಕ್ಕೆ ಹಾನಿಕರವಾಗಿಯೇ ಪರಿಗಣಿಸಲಾಗುತ್ತದೆ.
ಇದಕ್ಕೆ ವಿರುದ್ಧವಾಗಿ ಹುಬ್ಬಳ್ಳಿ ನಗರದಲ್ಲಿ AQI ಕೇವಲ 72ರಷ್ಟಿದ್ದು, ಉತ್ತಮ ಮಟ್ಟದ ಗಾಳಿ ಗುಣಮಟ್ಟ ದಾಖಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಮಂಗಳೂರು ಈಗ ಸ್ವಲ್ಪ ಸುಧಾರಣೆ ಕಂಡರೂ, AQI 115ರೊಂದಿಗೆ ಇನ್ನೂ ಕಳಪೆ ಮಟ್ಟದಲ್ಲೇ ಇದೆ.
ರಾಜ್ಯದ ಪ್ರಮುಖ ನಗರಗಳ ಇಂದಿನ AQI:
- ಬೆಂಗಳೂರು – 109
- ಮಂಗಳೂರು – 115
- ಮೈಸೂರು – 117
- ಬೆಳಗಾವಿ – 46
- ಕಲಬುರ್ಗಿ – 90
- ಶಿವಮೊಗ್ಗ – 112
- ಬಳ್ಳಾರಿ – 103
- ಹುಬ್ಬಳ್ಳಿ – 72
- ಉಡುಪಿ – 113
- ವಿಜಯಪುರ – 75
ತಜ್ಞರ ಪ್ರಕಾರ, ಸಂಖ್ಯೆಗಳು ಸ್ವಲ್ಪ ಇಳಿಕೆಯಾಗಿದ್ದರೂ, ದೀರ್ಘಕಾಲದ ದೃಷ್ಟಿಯಲ್ಲಿ ಈ ಮಟ್ಟದ ವಾಯು ಗುಣಮಟ್ಟ ಉಸಿರಾಟ ಸಮಸ್ಯೆಗಳು, ಅಲರ್ಜಿ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.
AQI ವರ್ಗೀಕರಣ:
- 0–50: ಉತ್ತಮ
- 50–100: ಮಧ್ಯಮ
- 100–150: ಕಳಪೆ
- 150–200: ಅನಾರೋಗ್ಯಕರ
- 200–300: ಗಂಭೀರ
- 300+: ಅಪಾಯಕಾರಿ
ಒಟ್ಟಿನಲ್ಲಿ, ರಾಜ್ಯದ ಕೆಲ ನಗರಗಳಲ್ಲಿ ಸುಧಾರಣೆ ಕಂಡರೂ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಆರೋಗ್ಯಕ್ಕೆ ಸವಾಲಾಗಿಯೇ ಉಳಿದಿದೆ.



