ಬೆಂಗಳೂರು: 2026-27ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 5ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಟ್ಟು 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 11 ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷ ಶಿಕ್ಷಕರ ವಿಭಾಗದಲ್ಲಿಯೂ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು
- ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿ. ಉಮಾ
- ಚಿಕ್ಕೋಡಿ–ಮೂಡಲಗಿ ಶೈಕ್ಷಣಿಕ ವಲಯದ ಕೆ.ಹೆಚ್.ಪಿ.ಎಸ್. ಹಲ್ಲೂರು ಕ್ರಾಸ್ ಶಾಲೆಯ ಬಸಪ್ಪ ಪರಪ್ಪ ಪಾಟೀಲ
- ಕುಂದಾಪುರ ತಾಲೂಕಿನ ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಶೋಕ
- ದೇವದುರ್ಗ ತಾಲೂಕಿನ ಸರ್ಕಾರಿ ಗುಂಡೇರದೊಡ್ಡಿ ಕಿರಿಯ ಪ್ರಾಥಮಿಕ ಶಾಲೆಯ ಸುರೇಶ್ ಕೆ.
- ವಿಜಯಪುರ ತಾಲೂಕಿನ ಕೆಂಗಲಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಣಮಂತ ಕಲ್ಲಪ್ಪ ಕಾತರಕಿ
- ಹೊನ್ನಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಷಾ ವಿ. ನಾಯಕ್
- ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಸ್ತಾನ್ ವಲಿ
- ಬೆಳಗಾವಿ ಗ್ರಾಮಾಂತರ ತಾಲೂಕಿನ ಜಾಫರವಾಡಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ ಬಾಳಪ್ಪ ಹಾಲೆನ್ನವರ
- ಕೊಳ್ಳೇಗಾಲ ಸತ್ತೇಗಾಲ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರೋಜಮ್ಮ
- ಆಳಂದ ತಾಲೂಕಿನ ಗುಂಜಬಬಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ
- ಬೆಂಗಳೂರು ದಕ್ಷಿಣ ವಲಯದ ಕೆಂಬತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರತ್ನಮ್ಮ ಎನ್.ಎಂ.
- ಜಮಖಂಡಿ–ತೇರದಾಳದ ಶ್ರೀ ಜಿನಸೇನಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯ ನೇಮಣ್ಣ ಬಮ್ಮಣ್ಣ ಜಮಖಂಡಿ
- ಯಲ್ಲಾಪುರ ಗಣಪತಿಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಮಚಂದ್ರ ಈ. ನಾಯ್ಕ
- ಕೊರಟಗೆರೆ ತಾಲೂಕಿನ ಮುದಿಗೌಡನಹನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಾಲಿನಿ ಎಂ.
- ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಮಾರನಾಯ್ಕ ಬಿ.ಡಿ.
- ಬೆಂಗಳೂರು ಉತ್ತರ ವಲಯದ ಗೃಹಲಕ್ಷ್ಮೀ ಬಡಾವಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೃಷ್ಣಮೂರ್ತಿ ಕೆ.ಎಸ್.
- ಹೊನ್ನಾಳಿಯ ಸದಾಶಿವಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ ಬಡಿಗೇರ
- ತುರುವೇಕೆರೆಯ ಹೆಗ್ಡೆರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೇಮಕುಮಾರ್ ವಿ.ಎಸ್.
- ಸಿರಗುಪ್ಪದ ಕೊಂಚಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ದುರಗಪ್ಪ ಎಚ್.
- ಗಂಗಾವತಿಯ ಹನವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈಲಾರಪ್ಪ ಬೂದಿಹಾಳ
ಪ್ರೌಢಶಾಲಾ ಶಿಕ್ಷಕರು
- ಹಳಿಯಾಳ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ಬಿರಾದಾರ ಸಿದ್ದಪ್ಪ ವೀರಭದ್ರಪ್ಪ
- ಜೀವನ್ ಭೀಮಾನಗರ, ಬೆಂಗಳೂರು ದಕ್ಷಿಣ ವಲಯ-4ರ ಕರ್ನಾಟಕ ಪಬ್ಲಿಕ್ ಶಾಲೆಯ ಶೈನಾಕುಮಾರಿ ಎಂ.
- ಶಿವಮೊಗ್ಗದ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕುಬೇರನಾಯ್ಕ ಬಿ.
- ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ನೀಲಕಂಠ ಗಾವಂಕರ್
- ಬಾಗೇಪಲ್ಲಿ ಗೂಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ. ವೆಂಕಟೇಶ
- ಕುಮಟದ ಅಘನಾಶಿನಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಆರ್. ನಾಯ್ಕ
- ಬಂಟ್ವಾಳದ ಮೋದನಕಾಪು ಕಾರ್ಮೆಲ್ ಹೈಸ್ಕೂಲ್ನ ರೋಶನ್ ಅಲೆಕ್ಸಾಂಡರ್
- ಮೈಸೂರು ದಕ್ಷಿಣ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದ ದೈಹಿಕ ಶಿಕ್ಷಕ ಜಯಶೀಲ
- ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮಥಾಯಿ ಟಿ.
- ದಾವಣಗೆರೆ ತಾಲೂಕಿನ ನಿಟ್ಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಯಪ್ಪ ಕೆ.ಟಿ.
ವಿಶೇಷ ಶಿಕ್ಷಕ
- ವಿಜಯಪುರ ಗ್ರಾಮಾಂತರ ತಾಲೂಕಿನ ಟಕ್ಕಲಕಿ ಸರ್ಕಾರಿ ಪ್ರೌಢಶಾಲೆಯ ವಿಶೇಷ ಶಿಕ್ಷಕ ಆನಂದ ಮಾದೇವ ಝಂಡೆ.



