HomeCrime Newsಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿ ಬ್ಲ್ಯಾಕ್‌ʼಮೇಲ್: ದೂರು ದಾಖಲು

ಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿ ಬ್ಲ್ಯಾಕ್‌ʼಮೇಲ್: ದೂರು ದಾಖಲು

For Dai;y Updates Join Our whatsapp Group

Spread the love

ಬೆಂಗಳೂರು: ಸೈಬರ್​​ ವಂಚನೆ ಕಡಿವಾಣಕ್ಕೆ ಸರ್ಕಾರ ಚಾಪೆ ಕಳಗೆ ನುಗ್ಗಿದರೆ, ವಂಚಕರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಬೇರೆ ಬೇರೆ ಮಾರ್ಗಗಳಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ. ಇದೀಗ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೈಬರ್‌ ವಂಚಕರು ಹೊಸ ತಂತ್ರಕ್ಕೆ ಕೈ ಹಾಕಿದ್ದು,

ಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ವಂಚಕರು ಅಧಿಕಾರಿಗಳು ಕಾರ್ಯ ನಿರ್ವಹಿಸುವ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನಾನು ಲೋಕಾಯುಕ್ತ ಜಸ್ಟೀಸ್ ಬಿ.ಎಸ್ ಪಾಟೀಲ್ , ಹಾಗೂ ಉಪಯೋಕಾಯುಕ್ತ ಫಣೀಂದ್ರ ಎಂದು ಕರೆ ಮಾಡುವ ಅಪರಿಚಿತರು.

ಇಂಪಾರ್ಟೆಂಟ್ ಕಾಲ್, ಜಸ್ಟೀಸ್ ಅವರೇ ಕರೆ ಮಾಡಿದ್ದಾರೆಂದು ತಕ್ಷಣ ರಿಸೀವ್ ಮಾಡುವ ಸರ್ಕಾರಿ ಅಧಿಕಾರಿಗಳು, ನಂತರ ಅವರ ಅವರು ಕಾರ್ಯನಿರ್ವಹಿಸುವ ಡಿಪಾರ್ಟ್ಮೆಂಟ್ ನಲ್ಲಿ ಏನೇನು ಕೆಲಸ ನಡೀತಿದೆ ಎಂದು ತಿಳಿದುಕೊಳ್ಳುವ ಅಪರಿಚಿತರು ಬಳಿಕ ಹೆದರಿಸುತ್ತಿದ್ದರು.

ನಿಮ್ಮ ಮೇಲೆ ಲಂಚ ಸ್ವೀಕಾರದ ಆರೋಪ ಬಂದಿದೆ ಎಂದು ಬೆದರಿಕೆ ಹಾಕುತ್ತಿದ್ದರು. ಅಷ್ಟೇ ಅಲ್ಲದೆ ಲೋಕಾಯುಕ್ತ ದಾಳಿ ತಡೆಯಬೇಕು ಎಂದರೆ ಇಂತಿಷ್ಟು ಹಣ ಕೊಡಬೇಕು ಅಂತ ಡಿಮ್ಯಾಂಡ್‌ ಮಾಡಿದ್ದಾರೆ. ಇದೇ ರೀತಿ ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ)ಗೂ ಕರೆ ಮಾಡಿದ್ದ ಅಪರಿಚಿತರು ಬೆದರಿಕೆ ಹಾಕಿದ್ದಾರೆ.

ಅಧಿಕಾರಿಗಳನ್ನು ಬೆದರಿಸುತ್ತಿದ್ದ ಖತರ್ನಾಕ್‌ಗಳು ಎಇಇ ವೆಂಕಟೇಶ್‌ ಅವರಿಗೂ ಕರೆ ಮಾಡಿದ್ದರು. ಮೊದಲಿಗೆ ಕರೆಯನ್ನ ಸ್ವೀಕಾರ ಮಾಡಿರಲಿಲ್ಲ. ಪದೇ ಪದೇ ಕರೆ ಮಾಡಿದಾಗ ಬೆದರಿಕೆ ಬಂದಿದೆ. ಇದ್ರಿಂದ ಅನುಮಾನಗೊಂಡು ನೇರವಾಗಿ ಲೋಕಾಯುಕ್ತ ಕಚೇರಿಗೆ ವೆಂಕಟೇಶ್‌ ಬಂದು ಮಾಹಿತಿ ನೀಡಿದ್ದಾರೆ.

ಈ ವೇಳೆ ಕಾಲ್‌ ಬಂದಿದ್ದ ನಂಬರ್‌ ಜಸ್ಟೀಸ್ ಬಿ.ಎಸ್ ಪಾಟೀಲ್ ಹಾಗೂ ಉಪಲೋಕಾಯುಕ್ತ ಫಣೀಂದ್ರ ಅವರದ್ದಲ್ಲ ಅನ್ನೋದು ಗೊತ್ತಾಗಿದೆ. ಜಸ್ಟೀಸ್ ಹೆಸರು ಬಳಸಿ ಬ್ಲ್ಯಾಕ್‌ಮೇಲ್‌ ಮಾಡಲಾಗ್ತಿದೆ ಎಂದು ತಿಳಿದುಬಂದಿದೆ. ಜಸ್ಟೀಸ್‌ಗಳ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ಹೆಸರು ದುರ್ಬಳಕೆ ಮಾಡಿರುವ ಹಿನ್ನಲೆ ಅವರ ಪರವಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ದೂರು ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!