• About
  • Advertise
  • Privacy & Policy
  • Contact
Tuesday, November 17, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಕೋಟಿ ಕೋಟಿ ಲಂಚ, ರೆಸಾರ್ಟ್ʼನಲ್ಲಿ ರಹಸ್ಯ ತರಬೇತಿ, ಖಾಲಿ ಚೆಕ್ ಗ್ಯಾರಂಟಿ: KPSC ಹೈಟೆಕ್ ಸ್ಕ್ಯಾಮ್ ಕಂಡು ED ಅಧಿಕಾರಿಗಳೇ ಶಾಕ್!

graochandan1@gmail.com by graochandan1@gmail.com
October 1, 2026
in Karnataka News
0
SHARES
5
VIEWS
Share on Facebook

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣವು ಅತ್ಯಂತ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ED) ಎಂಟ್ರಿಯಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಿಂದ ಸಿಐಡಿ (CID) ತನಿಖೆಯಲ್ಲಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಣಕಾಸು ಅಕ್ರಮ ತಡೆ ಕಾಯ್ದೆಯಡಿ (PMLA) ಸ್ವತಃ ಪ್ರತ್ಯೇಕ ಇಸಿಐಆರ್ (ECIR) ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು, ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಅವರ ಸಹಚರ ಬಸವರಾಜ್ ಕನ್ನಾಳೆ ಅವರನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.

 ಇಡಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಸಿಕ್ಕ ಸಾಕ್ಷ್ಯಗಳ ಪ್ರಕಾರ, ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ತಮ್ಮ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಯನ್ನೇ ದುರ್ಬಳಕೆ ಮಾಡಿಕೊಂಡು ಕೋಟಿ ಕೋಟಿ ಹಣದ ನೆಟ್‌ವರ್ಕ್ ರೂಪಿಸಿದ್ದರು. ಹಣ ಕೊಟ್ಟು ಉದ್ಯೋಗ ಪಡೆಯಬಲ್ಲ ಶ್ರೀಮಂತ ಅಭ್ಯರ್ಥಿಗಳ ಮಾಹಿತಿಯನ್ನು ಜ್ಞಾನೇಂದ್ರ ಕುಮಾರ್ ಒದಗಿಸುತ್ತಿದ್ದರೆ, ಬಸವರಾಜ್ ಕನ್ನಾಳೆ ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದ. ಸರ್ಕಾರಿ ಉದ್ಯೋಗಕ್ಕಾಗಿ ಆರಂಭದಲ್ಲಿ ₹70 ರಿಂದ ₹80 ಲಕ್ಷ ಡಿಮ್ಯಾಂಡ್ ಮಾಡಿ, ಕೊನೆಗೆ ₹30 ರಿಂದ ₹40 ಲಕ್ಷಕ್ಕೆ ಡೀಲ್ ಅಂತಿಮಗೊಳಿಸಲಾಗುತ್ತಿತ್ತು.

 ಅಭ್ಯರ್ಥಿಗಳು ಮುಂದೆ ಹಣ ನೀಡದೆ ವಂಚಿಸಬಾರದೆಂದು ಡೀಲ್ ಮೊತ್ತದ ಶೇಕಡಾ 70 ರಿಂದ 80ರಷ್ಟು ಹಣವನ್ನು ನಗದು ರೂಪದಲ್ಲಿ ಪಡೆಯಲಾಗುತ್ತಿತ್ತು. ಉಳಿದ ಮೊತ್ತಕ್ಕೆ ಅಭ್ಯರ್ಥಿಗಳು ಹಾಗೂ ಅವರ ಕುಟುಂಬಸ್ಥರಿಂದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು (Blank Cheques) ಗ್ಯಾರಂಟಿಗಾಗಿ ಪಡೆದುಕೊಳ್ಳಲಾಗುತ್ತಿತ್ತು! “ಕೆಲಸ ಸಿಕ್ಕ ನಂತರ ಬಾಕಿ ಹಣ ಕೊಟ್ಟು ಚೆಕ್ ಒಯ್ಯಿರಿ” ಎಂದು ಗ್ಯಾರಂಟಿ ನೀಡಲಾಗುತ್ತಿತ್ತು. ಇಡಿ ದಾಳಿ ವೇಳೆ ಬಸವರಾಜ್ ಕನ್ನಾಳೆಗೆ ಸೇರಿದ ಜಾಗಗಳಲ್ಲಿ ಈ ರೀತಿ ಸಹಿ ಮಾಡಿದ ನೂರಾರು ಖಾಲಿ ಚೆಕ್‌ಗಳು ಪತ್ತೆಯಾಗಿವೆ.

ಹಣ ಪಾವತಿಸಿದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಖಾಸಗಿ ರೆಸಾರ್ಟ್‌ಗಳು ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿ ಇರಿಸಲಾಗುತ್ತಿತ್ತು. ಜ್ಞಾನೇಂದ್ರ ಕುಮಾರ್ ಮೂಲಕ ಸೋರಿಕೆಯಾದ ಒರಿಜಿನಲ್ ಪ್ರಶ್ನೆಪತ್ರಿಕೆ ಮತ್ತು ಸಿದ್ಧಪಡಿಸಿದ ಉತ್ತರಗಳನ್ನು ನೀಡಿ ರಾತ್ರೋರಾತ್ರಿ ಕಂಠಪಾಠ ಮಾಡಿಸಿ, ಮಾಕ್ ಎಕ್ಸಾಂ ನಡೆಸಲಾಗುತ್ತಿತ್ತು. ಪರೀಕ್ಷೆಯ ದಿನ ಬೆಳಿಗ್ಗೆ ಆರೋಪಿಗಳೇ ತಮ್ಮ ಸ್ವಂತ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಬಳಿಗೆ ತಲುಪಿಸುತ್ತಿದ್ದರು ಎಂಬುದು ಇಡಿ ತನಿಖೆಯಲ್ಲಿ ಬಯಲಾಗಿದೆ.

Tags: Basavaraj KannaleBreakingNewsED InvestigationGyanendra Kumar GangwarKarnatakaKPSC ScamKPSC Veterinary Officer RecruitmentNewsHeadlinesVijayasakshivijayasakshinews
ShareSendShare
Previous Post

ಬೀದರ್ʼನಲ್ಲಿ ಭೀಕರ ದುರಂತ: ಫೈನಾನ್ಸ್ ನೌಕರನ ಕಿಡ್ನಾಪ್ ಮಾಡಿ ಹತ್ಯೆ, ಐವರು ಆರೋಪಿಗಳ ಬಂಧನ!

Next Post

ಗಾಯಗೊಂಡರೂ ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಧೈರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ!

graochandan1@gmail.com

graochandan1@gmail.com

Next Post

ಗಾಯಗೊಂಡರೂ ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಧೈರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಟೀ ಜೊತೆ ಬಿಸ್ಕತ್ತು ತಿನ್ನುವ ಮುನ್ನ ಎಚ್ಚರ! ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

ಟೀ ಜೊತೆ ಬಿಸ್ಕತ್ತು ತಿನ್ನುವ ಮುನ್ನ ಎಚ್ಚರ! ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

November 17, 2026
KPSC Veterinary Scam: 329 ಅಭ್ಯರ್ಥಿಗಳಿಗೆ CID ನೋಟಿಸ್; ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ!

ಶಿವಶಂಕರಪ್ಪ, ಗ್ಯಾನೇಂದ್ರ ಜೊತೆ ಹಣಕಾಸಿನ ನಂಟು ಆರೋಪ; ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಬಂಧನ!

November 17, 2026
5 ಸಾವಿರ ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ಅಡವಿಡಲು ಒತ್ತಾಯ; ಬೆಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಆಕ್ರೋಶ!

5 ಸಾವಿರ ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ಅಡವಿಡಲು ಒತ್ತಾಯ; ಬೆಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಆಕ್ರೋಶ!

November 17, 2026
ರಣಬೀರ್ ಕಪೂರ್-ಯಶ್ ನಟನೆಯ ರಾಮಾಯಣಕ್ಕೆ ಭರ್ಜರಿ ರೆಸ್ಪಾನ್ಸ್: 800 ಕೋಟಿ ಕ್ಲಬ್ ಸೇರಿದ ಸಿನಿಮಾ

ಬಿಡುಗಡೆಯಾಗಿ 12 ದಿನದಲ್ಲೇ ‘RRR’ ದಾಖಲೆ ಧೂಳೀಪಟ ಮಾಡಿದ ‘ರಾಮಾಯಣ’: ವಿಶ್ವಾದ್ಯಂತ ₹1,437 ಕೋಟಿ ಗಳಿಕೆ!

November 17, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಟೀ ಜೊತೆ ಬಿಸ್ಕತ್ತು ತಿನ್ನುವ ಮುನ್ನ ಎಚ್ಚರ! ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

ಟೀ ಜೊತೆ ಬಿಸ್ಕತ್ತು ತಿನ್ನುವ ಮುನ್ನ ಎಚ್ಚರ! ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

November 17, 2026
KPSC Veterinary Scam: 329 ಅಭ್ಯರ್ಥಿಗಳಿಗೆ CID ನೋಟಿಸ್; ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ!

ಶಿವಶಂಕರಪ್ಪ, ಗ್ಯಾನೇಂದ್ರ ಜೊತೆ ಹಣಕಾಸಿನ ನಂಟು ಆರೋಪ; ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಬಂಧನ!

November 17, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper